“ಒಳ್ಳೆಯ ಮನುಷ್ಯನಾಗುತ್ತೇನೆ” ಶಾರುಖ್ ಖಾನ್ ಪುತ್ರನ ವಾಗ್ದಾನ"
ಇನ್ನು ಮುಂದೆ ಯಾವುದೇ ರೀತಿಯ ಕೆಟ್ಟ ಕೆಲಸಗಳನ್ನು ಮಾಡಲ್ಲ; ಒಳ್ಳೆಯ ಮನುಷ್ಯನಾಗುತ್ತೇನೆ. ಈ ರೀತಿಯಾಗಿ ಹೇಳಿರೋದು ಬೇರೇ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಟನ ಮಗ ಆರ್ಯನ್ ಖಾನ್.
Published: 17th October 2021 02:21 PM | Last Updated: 17th October 2021 02:21 PM | A+A A-

ಆರ್ಯನ್ ಖಾನ್
ಮುಂಬೈ: ಇನ್ನು ಮುಂದೆ ಯಾವುದೇ ರೀತಿಯ ಕೆಟ್ಟ ಕೆಲಸಗಳನ್ನು ಮಾಡಲ್ಲ; ಒಳ್ಳೆಯ ಮನುಷ್ಯನಾಗುತ್ತೇನೆ. ಈ ರೀತಿಯಾಗಿ ಹೇಳಿರೋದು ಬೇರೇ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಟನ ಮಗ ಆರ್ಯನ್ ಖಾನ್.
ಸದ್ಯ ಶಾರುಖ್ ಖಾನ್ ಪುತ್ರ, ಆರ್ಯನ್ ಖಾನ್ ಮುಂಬೈನ ಅರ್ತೂರ್ ರೋಡ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಇದಕ್ಕೂ ಮುನ್ನ ಎನ್ ಸಿ ಬಿ ಅಧಿಕಾರಿಗಳ ವಶದಲ್ಲಿದ್ದಾಗ ಆರ್ಯನ್ ಖಾನ್ ಗೆ ಕೌನ್ಸೆಲಿಂಗ್ ನಡೆಸಲಾಗಿತ್ತು. ಅಧಿಕಾರಿಗಳ ಮಾರ್ಗದರ್ಶನದ ನಂತರ ಆರ್ಯನ್ ಖಾನ್, ಜೈಲಿನಿಂದ ಹೊರಬಂದ ಮೇಲೆ ತಪ್ಪು ಕೆಲಸ ಮಾಡಲ್ಲ, ಒಳ್ಳೆಯ ಕಾರ್ಯಗಳನ್ನು ಮಾಡುತ್ತೇನೆ. ಬಡವರಿಗೆ ಸಹಾಯ ಮಾಡೋದಾಗಿ ಎನ್ ಸಿ ಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ ವಾಗ್ದಾನ ಮಾಡಿದ್ದಾನೆಂಬುದು ಗೊತ್ತಾಗಿದೆ.
ಎನ್ ಸಿಬಿ ವಶದಲ್ಲಿದ್ದಾಗ ಎಸ್ಆರ್ ಕೆ ಪುತ್ರನಿಗೆ ಎನ್ ಜಿ ಒನ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಅಕ್ಟೋಬರ್ 2ರಂದು ಐಷಾರಾಮಿ ಕ್ರೂಸ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಅಧಿಕಾರಿಗಳು ದಾಳಿ ಮಾಡಿ, ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿತ್ತು. ಮಾಧಕ ವಸ್ತುಗಳ ಬಳಕೆ, ಮಾರಾಟ ಹಾಗೂ ಖರೀದಿ ಆರೋಪಗಳನ್ನು ಎನ್ ಸಿಬಿ, ಸ್ಟಾರ್ ನಟನ ಮೇಲೆ ಹೊರಿಸಿದೆ.