ಎಐಎಡಿಎಂಕೆ ಒಗ್ಗೂಡಿಸಲು, ಲೋಕಸಭಾ ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಲು ಎಲ್ಲಾ ಶಕ್ತಿಯನ್ನು ಬಳಸುತ್ತೇನೆ: ವಿಕೆ ಶಶಿಕಲಾ
ಎಐಎಡಿಎಂಕೆ ತನ್ನ ಸುವರ್ಣ ಮಹೋತ್ಸವ ವರ್ಷಕ್ಕೆ ಭಾನುವಾರ ಕಾಲಿಡುತ್ತಿದ್ದಂತೆ, ನಾಲ್ಕು ವರ್ಷಗಳ ಹಿಂದೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿದ್ದ ವಿಕೆ ಶಶಿಕಲಾ ಅವರು ಮುಂಬರುವ ವರ್ಷಗಳಲ್ಲಿ ಬಲವಾದ....
Published: 17th October 2021 06:58 PM | Last Updated: 17th October 2021 06:58 PM | A+A A-

ವಿಕೆ ಶಶಿಕಲಾ
ಚೆನ್ನೈ: ಎಐಎಡಿಎಂಕೆ ತನ್ನ ಸುವರ್ಣ ಮಹೋತ್ಸವ ವರ್ಷಕ್ಕೆ ಭಾನುವಾರ ಕಾಲಿಡುತ್ತಿದ್ದಂತೆ, ನಾಲ್ಕು ವರ್ಷಗಳ ಹಿಂದೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿದ್ದ ವಿಕೆ ಶಶಿಕಲಾ ಅವರು ಮುಂಬರುವ ವರ್ಷಗಳಲ್ಲಿ ಬಲವಾದ ರಾಜಕೀಯ ಅಜೆಂಡಾ ಹೊಂದಿರುವ ಸೂಚನೆ ನೀಡಿದ್ದಾರೆ. ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸಲು ಬೃಹತ್ ಎಲ್ಲಾ ಶಕ್ತಿಯನ್ನು ಬಳಸುವುದಾಗಿ ಹೇಳಿದ್ದಾರೆ.
ಎಐಎಡಿಎಂಕೆಯ ಯಾವುದೇ ನಾಯಕರ ವಿರುದ್ಧ ವಾಗ್ದಾಳಿ ನಡೆಸದ ಶಶಿಕಲಾ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಇಂದು ಸುವರ್ಣ ಮಹೋತ್ಸವ ವರ್ಷದ ಸ್ಮರಣಾರ್ಥ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, ಯಾವುದೇ ನಾಯಕರ ಹೆಸರು ಪ್ರಸ್ತಾಪಿಸದೆ ಎಐಎಡಿಎಂಕೆ ಮತ್ತೆ ಗೆಲ್ಲಬೇಕು ಎಂದರೆ ನಾವು ಒಟ್ಟಾಗಬೇಕು ಎಂದು ಎಐಎಡಿಎಂಕೆ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಟಿ ನಗರದ ಅರ್ಕಾಟ್ ರಸ್ತೆಯಲ್ಲಿರುವ ಎಂಜಿಆರ್ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಶಶಿಕಲಾ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಂದು ವಿವರಿಸಿದ ಫಲಕವನ್ನು ಅನಾವರಣಗೊಳಿಸಿದರು ಮತ್ತು ಎಂದಿನಂತೆ ಪಕ್ಷದ ಧ್ವಜವಿರುವ ಕಾರನ್ನು ಬಳಸಿದರು.
ರಾಮವರಂ ಉದ್ಯಾನದಲ್ಲಿರುವ ದಿವಂಗತ ಎಂಜಿಆರ್ ಅವರ ಸಂಬಂಧಿಕರೊಂದಿಗೆ ಶಶಿಕಲಾ ಸಂವಾದ ನಡೆಸಿದರು.
ನಂತರ ತಮ್ಮ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, "ನಾನು ಎಐಎಡಿಎಂಕೆಯನ್ನು ಒಗ್ಗೂಡಿಸಲು ನನ್ನ ಎಲ್ಲಾ ಶಕ್ತಿಯನ್ನು ಬಳಸುತ್ತೇನೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸುತ್ತೇವೆ" ಎಂದು ಹೇಳಿದರು.