ದೀಪಾವಳಿಯನ್ನು ಜಶ್-ಎ ರಿವಾಜ್ ನ್ನಾಗಿಸಿದ ಫ್ಯಾಬ್ ಇಂಡಿಯಾ ವಿರುದ್ಧ ತೇಜಸ್ವಿ ಸೂರ್ಯ ಆಕ್ಷೇಪ

ದೀಪಾವಳಿಯ ಹಬ್ಬವನ್ನು ಜಶ್-ಎ-ರಿವಾಜ್ ನ್ನಾಗಿಸಿ ಫ್ಯಾಬ್ ಇಂಡಿಯಾ ಜಾಹಿರಾತು ಪ್ರಕಟಿಸಿದ್ದರ ವಿರುದ್ಧ ವ್ಯಾಪಕ ಆಕ್ರೋಶ, ಆಕ್ಷೇಪಗಳು ವ್ಯಕ್ತವಾಗಿದೆ. 
ಫ್ಯಾಬ್ ಇಂಡಿಯಾ ಜಾಹಿರಾತು
ಫ್ಯಾಬ್ ಇಂಡಿಯಾ ಜಾಹಿರಾತು

ಬೆಂಗಳೂರು: ದೀಪಾವಳಿಯ ಹಬ್ಬವನ್ನು ಜಶ್-ಎ-ರಿವಾಜ್ ನ್ನಾಗಿಸಿ ಫ್ಯಾಬ್ ಇಂಡಿಯಾ ಜಾಹಿರಾತು ಪ್ರಕಟಿಸಿದ್ದರ ವಿರುದ್ಧ ವ್ಯಾಪಕ ಆಕ್ರೋಶ, ಆಕ್ಷೇಪಗಳು ವ್ಯಕ್ತವಾಗಿದೆ. 

ಸಂಸದ ತೇಜಸ್ವಿ ಸೂರ್ಯ ಫ್ಯಾಬ್ ಇಂಡಿಯಾದ ಜಾಹಿರಾತಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಂಸ್ಥೆ ಒತ್ತಡಕ್ಕೆ ಮಣಿದು ಜಾಹಿರಾತಿನ ಪೋಸ್ಟ್ ನ್ನು ಹಿಂಪಡೆದಿದೆ.

ದೀಪಾವಳಿ ಜಶ್-ಎ-ರಿವಾಜ್ ಅಲ್ಲ. ಈ ರೀತಿಯಲ್ಲಿ ರೂಪದರ್ಶಿಗಳಿಗೆ ಹಿಂದೂಗಳ ಸಾಂಪ್ರದಾಯಿಕ ಉಡುಗೆಗಳನ್ನು ತೊಡಿಸದೇ ಇರುವುದು ಹಿಂದೂಗಳ ಹಬ್ಬವನ್ನು ಉದ್ದೇಶಪೂರ್ವಕ ಬದಲಾಯಿಸುವ ಪ್ರಯತ್ನ ನಡೆಸುವುದು ಕೂಡಲೇ ನಿಲ್ಲಬೇಕಿದೆ. ಈ ರೀತಿಯಾಗಿ ಉದ್ದೇಶಪೂರ್ವಕ ಕೆಲಸಗಳಿಗೆ ಫ್ಯಾಬ್ ಇಂಡಿಯಾ ಆರ್ಥಿಕವಾಗಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಸಂಸದರ ಈ ಟ್ವೀಟ್ ವೈರಲ್ ಆಗತೊಡಗಿ ಹಲವು ಮಂದಿ ರಿಟ್ವೀಟ್ ಮಾಡಿದ್ದರು. ಇತ್ತೀಚಿನ ಮಾಹಿತಿಯ ಪ್ರಕಾರ ಫ್ಯಾಬ್ ಇಂಡಿಯಾ ಒತ್ತಡಕ್ಕೆ ಮಣಿದು ಈ ಜಾಹಿರಾತಿನ ಪೋಸ್ಟರ್ ನ್ನು ಹಿಂಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com