ಹಿರಿಯ ಅಧಿಕಾರಿ ಸೂಚಿಸಿದರೆ ನೀವು ಕೊಲೆ ಮಾಡುತ್ತೀರಾ?: ಪೊಲೀಸ್ ಅಧಿಕಾರಿಗೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ನಿಮ್ಮ ಹಿರಿಯ ಅಧಿಕಾರಿ ಸೂಚಿಸಿದರೆ ಕೊಲೆ ಮಾಡುತ್ತೀರಾ? ಎಂದು ಪೊಲೀಸ್ ಅಧಿಕಾರಿಗೆ ಪ್ರಶ್ನಿಸಿರುವ ಮದ್ರಾಸ್ ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ದೇವರು ಮಾತ್ರ ಕಾಪಾಡಬೇಕು ಎಂದು ಬುಧವಾರ ಹೇಳಿದೆ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಚೆನ್ನೈ: ನಿಮ್ಮ ಹಿರಿಯ ಅಧಿಕಾರಿ ಸೂಚಿಸಿದರೆ ಕೊಲೆ ಮಾಡುತ್ತೀರಾ? ಎಂದು ಪೊಲೀಸ್ ಅಧಿಕಾರಿಗೆ ಪ್ರಶ್ನಿಸಿರುವ ಮದ್ರಾಸ್ ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ದೇವರು ಮಾತ್ರ ಕಾಪಾಡಬೇಕು ಎಂದು ಬುಧವಾರ ಹೇಳಿದೆ.

ಲೈಂಗಿಕ ಕಿರುಕುಳ ಪ್ರಕರಣದಿಂದ ಬಿಡುಗಡೆ ಕೋರಿ ವಿಲ್ಲುಪುರಂ ಜಿಲ್ಲೆಯ ಅಮಾನತುಗೊಂಡ ಎಸ್ಪಿ ಡಿ.ಕಣ್ಣನ್ ಅವರ ಕ್ರಿಮಿನಲ್ ಪರಿಷ್ಕರಣೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವೆಲ್ಮುರುಗನ್ ಅವರು, ದೇವರು ಮಾತ್ರ ಪೊಲೀಸ್ ಇಲಾಖೆಯನ್ನು ಉಳಿಸಬಲ್ಲ ಎಂದಿದ್ದಾರೆ.

ಪ್ರಕರಣದಲ್ಲಿ ಈ ಅಧಿಕಾರಿಯನ್ನು ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಮೊದಲನೆಯವರು ಅಮಾನತುಗೊಂಡ ವಿಶೇಷ ಡಿಜಿಪಿಯಾಗಿದ್ದು, ಮಹಿಳಾ ಅಧೀನ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ.

"ಪೋಲಿಸ್ ಇಲಾಖೆಯಲ್ಲಿ ಮಹಿಳೆಯರಿಗೆ ಗೌರವ ನೀಡದೆ ಇರುವುದು ನಾಚಿಕೆಗೇಡಿನ ಸಂಗತಿ" ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಣ್ಣನ್ ಅವರು ಫೆಬ್ರವರಿ 22 ರಂದು ಚೆನ್ನೈಗೆ ಪ್ರಯಾಣಿಸುತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಯ ಕಾರನ್ನು ತಡೆದ ಆರೋಪ ಎದುರಿಸುತ್ತಿದ್ದು, ತಮ್ಮ ಕಕ್ಷಿದಾರರು ಮೇಲಧಿಕಾರಿ ನೀಡಿದ ಸೂಚನೆಗಳನ್ನು ಪಾಲಿಸಿದ್ದಾರೆ ಎಂದು ಕಣ್ಣನ್ ಪರ ವಕೀಲರು ಕೋರ್ಟ್ ತಿಳಿಸಿದರು. ಇದಕ್ಕೆ ಅಧಿಕಾರಿ ಸೂಚಿಸಿದರೆ ನೀವು ಕೊಲೆ ಮಾಡುತ್ತೀರಾ? ಎಂದು ಕೋರ್ಟ್ ಪ್ರಶ್ನಿಸಿದೆ.

ಪ್ರಕರಣದ ಮೊದಲ ಆರೋಪಿ ವಿಶೇಷ ಡಿಜಿಪಿ ರಾಜೇಶ್‍ದಾಸ್ ಅವರನ್ನು ಮಹಿಳಾ ಐಪಿಎಸ್ ಅಧಿಕಾರಿಯನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com