ಶೇ 95ರಷ್ಟು ಜನರಿಗೆ ಬಿಜೆಪಿ ಬೇಕಿಲ್ಲ: ಉತ್ತರ ಪ್ರದೇಶ ಸಚಿವರಿಗೆ ಅಖಿಲೇಶ್ ಯಾದವ್ ತಿರುಗೇಟು
ಲಕ್ನೋ: ‘ಶೇ 95ರಷ್ಟು ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ’ ಎಂಬ ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ ಅವರ ಹೇಳಿಕೆಗೆ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.
ಶೇ 95ರಷ್ಟು ಜನರಿಗೆ ಬಿಜೆಪಿ ಅಗತ್ಯವಿಲ್ಲ‘ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ತಲಾವಾರು ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಶೇ 95ರಷ್ಟು ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವೇ ಇಲ್ಲ ಎಂದು ತಿವಾರಿ ಗುರುವಾರ ಹೇಳಿದ್ದರು.
‘ಸಚಿವರ ಪ್ರಕಾರ, ಜನರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಪರಿಣಾಮ ಬೀರದು. ಸಚಿವರಿಗೂ ಅದು ಬೇಕಿಲ್ಲ. ಏಕೆಂದರೆ ಜನ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ. ಶೇ 95ರಷ್ಟು ಜನರಿಗೆ ಬಿಜೆಪಿಯೂ ಬೇಕಿಲ್ಲ‘ ಎಂದು ಅಖಿಲೇಶ್ ಹೇಳಿದರು. ಜೀಪ್‌ಗೆ ಡೀಸೆಲ್ ಅಗತ್ಯವಿದೆಯೇ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಚಾಲನೆ ಮಾಡುತ್ತಿದ್ದ ಜೀಪ್ ಹರಿದು ಈಚೆಗೆ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು.
ದೇಶದ ಜನರ ತಲಾದಾಯವನ್ನು 2014ರಲ್ಲಿದ್ದ ತಲಾದಾಯಕ್ಕೆ ಹೋಲಿಸಿದರೆ ವಾಸ್ತವದಲ್ಲಿ ಇಂಧನ ದರ ಅಷ್ಟೇನೂ ಏರಿಕೆಯಾಗಿಲ್ಲ ಎಂಬುದು ತಿಳಿಯುತ್ತದೆ, ಇಂದು, ನಾಲ್ಕು ಚಕ್ರದ ವಾಹನಗಳನ್ನು ಮತ್ತು ಪೆಟ್ರೋಲ್ ಬಳಸುವ ಕೆಲವೇ ಜನರು ಇದ್ದಾರೆ. ಸದ್ಯ ಶೇ 95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲʼ ಎಂದಿದ್ದರು. ದೇಶ ಬಹು ಭಾಗಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿರುವ ಹೊತ್ತಿನಲ್ಲಿ ತಿವಾರಿ ಈ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ