ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್
ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್, ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.
Published: 23rd October 2021 07:55 PM | Last Updated: 23rd October 2021 07:57 PM | A+A A-

ಆರ್ಯನ್ ಖಾನ್, ದಿಗ್ವಿಜಯ್ ಸಿಂಗ್
ನವದೆಹಲಿ: ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್, ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆ ಕುರಿತು ಕಿಡಿಕಾರಿರುವ ಬಿಜೆಪಿ, ದಿಗ್ವಿಜಯ್ ಸಿಂಗ್ ರಾಜಕೀಯ ತುಷ್ಟೀಕರಣದ ಆಟವಾಡುತ್ತಿದ್ದಾರೆ ಎಂದು ಹೇಳಿದೆ.
ಮುಂಬೈಯ ಕರಾವಳಿಯಲ್ಲಿ ಕ್ರೂಸ್ ಶಿಪ್ ಮೇಲೆ ಅಕ್ಟೋಬರ್ 3 ರಂದು ಎನ್ ಸಿಬಿ ದಾಳಿಯ ನಂತರ ಆರ್ಯನ್ ಖಾನ್ ನನ್ನು ಬಂಧಿಸಲಾಗಿತ್ತು. ಸದ್ಯ ಜೈಲಿನಲ್ಲಿರುವ ಆರ್ಯನ್ ಖಾನ್, ವಿಶೇಷ ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿದ ನಂತರ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 26 ರಂದು ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಶಾರೂಖ್ ಖಾನ್ ಅವರ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಿರುವುದು ಬೇಸರವಾಗಿದೆ. ಆತನ ಅಪರಾಧ ಏನು? ಆತನ ಜೊತೆಯಲ್ಲಿದ್ದವನ ಬಳಿ 5 ಗ್ರಾಮ್ ಡ್ರಗ್ಸ್ ಸಿಕ್ಕಿದೆ. ಮುಂದ್ರಾ ಬಂದರಿನಲ್ಲಿ ಟನ್ ಗಟ್ಟಲೇ ವಶಕ್ಕೆ ಪಡೆದ ಹೆರಾಯಿನ್ ಬಗ್ಗೆ ಏನಾಯಿತು? ಕುಲದೀಪ್ ಸಿಂಗ್ ಯಾರು? ಎನ್ ಸಿಬಿ ಮತ್ತು ಎನ್ ಐಎ ಈ ಕೇಸ್ ಬಗ್ಗೆ ವಿಚಾರಣೆ ನಡೆಸುತ್ತಿದ್ದೆಯೇ ಎಂಬುದನ್ನು ನಮಗೆ ಹೇಳಲಿ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
It is sad Shah Rukh’s son is being victimised for being his son. What is his crime? Someone accompanying him had 5 gms of drug with him!! What about Tonnes of Heroin seized at Mundra Port? Who is Kuldeep Singh? Would NCB and now NIA investigating this case please tell us? #drug https://t.co/F2TWEi9RUr
— digvijaya singh (@digvijaya_28) October 23, 2021
ದಿಗ್ವಿಜಯ್ ಹೇಳಿಕೆ ವಿರುದ್ಧ ಪ್ರತಿದಾಳಿ ನಡೆಸಿರುವ ಮಧ್ಯ ಪ್ರದೇಶ ಬಿಜೆಪಿ, ನ್ಯಾಯಾಲಯದ ಆದೇಶ ಕಾಯದೆ ಕಾಂಗ್ರೆಸ್ ಮುಖಂಡರೇ ತೀರ್ಪು ನೀಡಿದ್ದಾರೆ. ಅಂತಿಮವಾಗಿ ದಿಗ್ವಿಜಯ್ ಸಿಂಗ್ ಆರ್ಯನ್ ಖಾನ್ ರಕ್ಷಣೆಗೆ ಬಂದಿದ್ದಾರೆ. ತನಿಖಾ ತಂಡ ವಾಸ್ತವ ಅಂಶ ಪರಿಶೀಲಿಸುತ್ತಿರುವಾಗ ದಿಗ್ವಿಜಯ್ ಸಿಂಗ್ ತೀರ್ಪು ನೀಡಿದ್ದಾರೆ. ಇಂತಹ ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಎಷ್ಟು ದಿನಗಳವರೆಗೆ ಜನರನ್ನು ನೀವು ಹಾದಿ ತಪ್ಪಿಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.