ಡ್ರಗ್ ಕೇಸಿನಲ್ಲಿ ನನ್ನನ್ನು ಸಿಲುಕಿಸಲು ವಾಟ್ಸಾಪ್ ಚಾಟ್ ಅನ್ನು ಎನ್ ಸಿಬಿ ತಪ್ಪಾಗಿ ಅರ್ಥೈಸಿಕೊಂಡಿದೆ: ಆರ್ಯನ್ ಖಾನ್ ವಾದ

ತಮ್ಮ ವಾಟ್ಸಾಪ್ ಚಾಟ್ ನ್ನು ಎನ್ ಸಿಬಿ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾನೆ.
ಆರ್ಯನ್ ಖಾನ್
ಆರ್ಯನ್ ಖಾನ್

ಮುಂಬೈ: ತಮ್ಮ ವಾಟ್ಸಾಪ್ ಚಾಟ್ ನ್ನು ಎನ್ ಸಿಬಿ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾನೆ.

ಈ ತಿಂಗಳ ಆರಂಭದಲ್ಲಿ ಮುಂಬೈ ಕಡಲ ತೀರದಲ್ಲಿ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಡ್ರಗ್ಸ್ ಸಿಕ್ಕಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಆರ್ಯನ್ ಖಾನ್ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ.

ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ ನಂತರ ಆರ್ಯನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದಾನೆ. ಅದರ ಅರ್ಜಿ ವಿಚಾರಣೆ ನಾಡಿದ್ದು ಸೋಮವಾರ ನಡೆಯಲಿದೆ.

ವಿಶೇಷ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ಆರ್ಯನ್ ಖಾನ್, ತಮ್ಮ ಮೊಬೈಲ್ ನಲ್ಲಿ ಸಿಕ್ಕಿರುವ ವಾಟ್ಸಾಪ್ ಚಾಟ್ ಗಳನ್ನು ಎನ್ ಸಿಬಿ ತಪ್ಪಾಗಿ ಅರ್ಥೈಸಿಕೊಂಡಿದ್ದು ಅದು ಅನ್ಯಾಯ ಮತ್ತು ತಪ್ಪಾಗಿರುತ್ತದೆ ಎಂದು ಹೇಳಿದ್ದಾನೆ.

ಹಡಗಿನಲ್ಲಿ ದಾಳಿ ನಡೆಸಿದ ವೇಳೆ ಎನ್ ಸಿಬಿಗೆ ಯಾವುದೇ ನಿಷೇಧಿತ ಮಾದಕ ವಸ್ತುಗಳು ಸಿಕ್ಕಿಲ್ಲ, ಅಲ್ಲದೆ ಕೇಸಿನಲ್ಲಿ ಅರ್ಬಾಜ್ ಮರ್ಚೆಂಟ್ ಮತ್ತು ಅಚಿತ್ ಕುಮಾರ್ ಬಿಟ್ಟರೆ ಬೇರೆ ಯಾರ ಜೊತೆಗೂ ತನಗೆ ಸಂಪರ್ಕವಿಲ್ಲ ಎಂದು 23 ವರ್ಷದ ಆರ್ಯನ್ ಖಾನ್ ಹೇಳಿದ್ದಾನೆ. 

ಇದುವರೆಗೆ ಈ ಕೇಸಿಗೆ ಸಂಬಂಧಪಟ್ಟಂತೆ ಎನ್ ಸಿಬಿ ಸುಮಾರು 20 ಮಂದಿಯನ್ನು ಬಂಧಿಸಿದೆ. ಪ್ರಸ್ತುತ ಆರ್ಯನ್ ಖಾನ್ ಮತ್ತು ಅರ್ಬಾಸ್ ಮರ್ಚೆಂಟ್ ಅರ್ತೂರ್ ರೋಡ್ ಜೈಲಿನಲ್ಲಿದ್ದರೆ ದಮೆಚ ಬೈಸುಲ್ಲದ ಮಹಿಳಾ ಕಾರಾಗೃಹದಲ್ಲಿದ್ದಾಳೆ. 

ಈ ಮೂವರು ಡ್ರಗ್ಸ್ ದಂಧೆಯ ಪಿತೂರಿಯ ಭಾಗವಾಗಿದ್ದಾರೆ ಎಂದು ತೀರ್ಪು ನೀಡಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com