ಶತಕೋಟಿ ಕೋವಿಡ್ ಲಸಿಕೆ ಪೂರೈಕೆಯ ಯಶಸ್ಸು ಭಾರತದ ಶಕ್ತಿ-ಸಾಮರ್ಥ್ಯವನ್ನು ಇಂದು ಜಗತ್ತಿಗೆ ತೋರಿಸಿದೆ: ಪ್ರಧಾನಿ ಮೋದಿ 

ದೇಶದ 100 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡುವ ಮೂಲಕ ಹೊಸ ಶಕ್ತಿಯೊಂದಿಗೆ ದೇಶ ಇಂದು ಮುನ್ನಡೆಯುತ್ತಿದೆ. ನಮ್ಮ ಲಸಿಕೆ ಕಾರ್ಯಕ್ರಮದ ಯಶಸ್ಸು ದೇಶದ ಶಕ್ತಿ-ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ದೇಶದ 100 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡುವ ಮೂಲಕ ಹೊಸ ಶಕ್ತಿಯೊಂದಿಗೆ ದೇಶ ಇಂದು ಮುನ್ನಡೆಯುತ್ತಿದೆ. ನಮ್ಮ ಲಸಿಕೆ ಕಾರ್ಯಕ್ರಮದ ಯಶಸ್ಸು ದೇಶದ ಶಕ್ತಿ-ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

ತಮ್ಮ ತಿಂಗಳ ಆಕಾಶವಾಣಿ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಉತ್ತರಾಖಂಡ ಸರ್ಕಾರ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಅಭಿನಂದನೆಗೆ ಅರ್ಹ. ಕಡಿದಾದ ಕಣಿವೆ ಪ್ರದೇಶದಲ್ಲಿ ಕುಗ್ರಾಮಗಳಿಗೂ ಹೋಗಿ ಜನರಿಗೆ ಲಸಿಕೆ ನೀಡುವುದು ಅಷ್ಟು ಸುಲಭ ಕೆಲಸವಲ್ಲ. ಅದೇ ರೀತಿ ಹಿಮಾಚಲ ಪ್ರದೇಶ ಕಷ್ಟದ ಪರಿಸ್ಥಿತಿ ಮಧ್ಯೆ ಶೇಕಡಾ 100ರಷ್ಟು ಲಸಿಕೆ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದರು.

ಉತ್ತರಾಖಂಡದ ಬಾಗೇಶ್ವರ್ ನ ಪೂನಮ್ ನೌಟಿಯಾಲ್ ಎಂಬ ಆರೋಗ್ಯ ವಲಯ ಕಾರ್ಯಕರ್ತೆಯನ್ನು ನಾವು ಇವತ್ತು ದೇಶದ ಜನತೆಯ ಮುಂದೆ ಪರಿಚಯಿಸಬೇಕು. ಕೋವಿಡ್-19 ಮೊದಲ ಡೋಸ್ ನ ಶೇಕಡಾ 100ರಷ್ಟು ಲಸಿಕೆ ನೀಡಿಕೆ ಕಾರ್ಯವನ್ನು ಅವರು ಪೂರ್ಣಗೊಳಿಸಿದ್ದಾರೆ ಎಂದು ಪ್ರಧಾನಿ ಪ್ರಸ್ತಾಪಿಸಿದರು.

ಇಂದು ನಾನು ಪ್ರತಿಯೊಬ್ಬ ಭಾರತೀಯವರಿಗೆ ಧನ್ಯವಾದ ಹೇಳಬೇಕು. ಸಬ್ ಕೋ ವಾಕ್ಸಿನ್, ಮಫ್ತ್ ವ್ಯಾಕ್ಸಿನ್ ಎಂಬ ಅಭಿಯಾನವನ್ನು ಆರಂಭಿಸಿದ್ದು ಇಂದು ಯಶಸ್ಸು ಸಿಕ್ಕಿದೆ. ನನ್ನ ಕಡೆಯಿಂದ ದೇಶದ ಪ್ರಧಾನಿಯಾಗಿ ಪ್ರತಿಯೊಬ್ಬರಿಗೂ ಅಭಿನಂದನೆಗಳು. 

ಅ.31 ರಾಷ್ಟ್ರೀಯ ಏಕತಾ ದಿನ: ಅಕ್ಟೋಬರ್ 31ರಂದು ನಾವು ರಾಷ್ಟ್ರೀಯ ಏಕತಾ ದಿವಸ ಆಚರಿಸುತ್ತೇವೆ. ಈ ಸಂದರ್ಭದಲ್ಲಿ ದೇಶದ ಐಕ್ಯತೆ, ಏಕತೆ ತೋರಿಸುವ ಸಂದೇಶ ಸಾರುವ ಕೆಲವು ಚಟುವಟಿಕೆಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು. ಸರ್ದಾರ್ ಪಟೇಲ್ ಅವರು ಒಂದು ಮಾತು ಹೇಳುತ್ತಿದ್ದರು, ನಮ್ಮ ಒಗ್ಗಟ್ಟಿನ ಪ್ರಯತ್ನಗಳ ಮೂಲಕ ನಮ್ಮ ದೇಶವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯಬಹುದು, ನಮ್ಮೊಳಗೆ ಒಗ್ಗಟ್ಟು ಇಲ್ಲದಿದ್ದರೆ ಹೊಸ ವಿಪತ್ತುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಹೀಗಾಗಿ ಭಾರತೀಯರಾದ ನಮ್ಮಲ್ಲಿ ಒಗ್ಗಟ್ಟು, ಏಕತೆ ಇರಬೇಕು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಳು ಇಂದಿಗೂ ನಮಗೆ ದಾರಿದೀಪ. ಈ ಭೂಮಿಯನ್ನು ಸುರಕ್ಷಿತವಾಗಿ ಇನ್ನಷ್ಟು ವಾಸಯೋಗ್ಯವನ್ನಾಗಿಸಲು ಜಗತ್ತಿಗೆ ಭಾರತ ಸ್ಪೂರ್ತಿಯಾಗಿದೆ. ಇಂದು ನಾನು ವಿಶ್ವಸಂಸ್ಥೆ ಬಗ್ಗೆ ಮಾತನಾಡುವಾಗ ಅಟಲ್ ಜಿಯವರ ಮಾತುಗಳು ನೆನಪಿಗೆ ಬರುತ್ತವೆ. 1977ರಲ್ಲಿ, ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಅಟಲ್ ಬಿಹಾರಿ ವಾಜಪೇಯಿಯವರು ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅಟಲ್ ಜಿಯವರು ಅಂದು ಮಾತನಾಡಿದ್ದ ಭಾಷಣದ ತುಣುಕನ್ನು ಕೇಳಿ ಎಂದು ವಿಡಿಯೊವನ್ನು ಇಂದಿನ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಪ್ರಸಾರ ಮಾಡಿದ್ದಾರೆ.

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಹಳಷ್ಟು ಸೋದರಿಯರ ಬಗ್ಗೆ ಒಂದು ವಿಷಯ ತಿಳಿದಿದೆ; ಈ ಸೋದರಿಯರು ಕಾಶ್ಮೀರದಲ್ಲಿ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸುವ  ಕೆಲಸದಲ್ಲಿ ತೊಡಗಿದ್ದಾರೆ; ಈ ಕೆಲಸ ದೇಶ ಭಕ್ತಿಯ ಭಾವನೆಯಿಂದ ತುಂಬಿದೆ ಎಂದು ಪ್ರಧಾನಿ ಹೇಳಿದರು. 

ಅಕ್ಟೋಬರ್ 24 ವಿಶ್ವಸಂಸ್ಥೆ ದಿನ: ಭಾರತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದೆ. ಇಂದು ಅಕ್ಟೋಬರ್ 24 ವಿಶ್ವಸಂಸ್ಥೆ ದಿನ. 

#PMonAIR: Friends, today while talking about UN I’m also remembering the words of Atal ji. In 1977, he made history by addressing United Nations in Hindi. Today I want to play excerpt of Atal ji's address for the listeners of 'Mann Ki Baat'. Listen to Atal ji's resounding voice – pic.twitter.com/JhmcaPmRuJ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com