ದೀಪಾವಳಿಯಲ್ಲಿ ಸ್ಥಳೀಯತೆಗೆ ಒತ್ತು ಕೊಡಿ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ 

ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ. ಈಗಿನಿಂದಲೇ ದೀಪಾವಳಿಗೆ ಹಲವರು ಸಿದ್ಧತೆ ನಡೆಸುತ್ತಿರಬಹುದು. ವಸ್ತುಗಳ ಖರೀದಿಯಲ್ಲಿ ಮುಳುಗಿರಬಹುದು, ದೇಶದ ನಾಗರಿಕರೇ ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಿ, ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ
ಪಿಎಂ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪಿಎಂ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ:ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ. ಈಗಿನಿಂದಲೇ ದೀಪಾವಳಿಗೆ ಹಲವರು ಸಿದ್ಧತೆ ನಡೆಸುತ್ತಿರಬಹುದು. ವಸ್ತುಗಳ ಖರೀದಿಯಲ್ಲಿ ಮುಳುಗಿರಬಹುದು, ದೇಶದ ನಾಗರಿಕರೇ ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಿ, ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 

ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಸ್ಥಳೀಯರಿಂದ ಸ್ಥಳೀಯ ವಸ್ತುಗಳನ್ನು ಖರೀದಿಸಿದರೆ ನಿಮ್ಮ ಹಬ್ಬಗಳು ಕೂಡ ಬೆಳಗುತ್ತದೆ, ಬಡ ಸಹೋದರ-ಸಹೋದರಿಯರ ಮನೆ ಕೂಡ ಬೆಳಗುತ್ತದೆ. ಕಲಾವಿದರು, ನೇಯ್ಗೆಗಾರರು, ಕಸೂತಿಗಾರರಿಗೆ ಸಹಾಯವಾಗುತ್ತದೆ. ನಾವು ಆರಂಭಿಸಿರುವ ಅಭಿಯಾನ ಈ ಹಬ್ಬದ ಸಮಯದಲ್ಲಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಯದಲ್ಲಿ ಈ ದೇಶದ ಧೈರ್ಯಶಾಲಿ ಪುತ್ರರನ್ನು ಮತ್ತು ಪುತ್ರಿಯರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ದೇಶಕ್ಕಾಗಿ ಹೋರಾಡಿದ ವೀರ ಯೋಧರನ್ನು ಸ್ಮರಿಸಿಕೊಳ್ಳುತ್ತೇವೆ. ಮುಂದಿನ ತಿಂಗಳು ಅಂತಹ ಒಬ್ಬ ಅಗ್ರಮಾನ್ಯ ವ್ಯಕ್ತಿ ದಂತಕಥೆ ಧೀರ ಯೋಧ ಭಗವಾನ್ ಬಿರ್ಸ ಮುಂಡ ಅವರ ಜನ್ಮವರ್ಷಾಚರಣೆ ಎಂದರು.

ಅಕ್ಟೋಬರ್ 31 ಏಕತಾ ದಿನಕ್ಕೆ ಮೂರು ಸ್ಪರ್ಧೆಗಳು: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಮೂರು ಸ್ಪರ್ಧೆಗಳಿರುತ್ತವೆ. ಸಂಸ್ಕೃತಿ ಸಚಿವಾಲಯ ಇದಕ್ಕೆ ಸಂಬಂಧಪಟ್ಟ ಮಾಹಿತಿ ನೀಡಲಿದೆ ಎಂದರು.

ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುವಂತೆ ನನಗೆ ಸಲಹೆಗಳು ಬರುತ್ತಿವೆ. ಅವುಗಳು ಮಹತ್ವದ್ದಾಗಿದ್ದು ಆ ಸಲಹೆಗಳನ್ನು ಸಂಸ್ಕೃತಿ ಇಲಾಖೆಗೆ ಕಳುಹಿಸಿದ್ದೇನೆ ಎಂದರು. 

ರಂಗೋಲಿಯಲ್ಲಿ ದೇಶದ ವೈವಿಧ್ಯತೆಯನ್ನು ತೋರಿಸಬಹುದು. ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ವಿವಿಧ ವಿಷಯಗಳನ್ನಿಟ್ಟುಕೊಂಡು ರಂಗೋಲಿಯನ್ನು ಬಿಡಿಸಲಾಗುತ್ತದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. 

ಜೀವನ ನಿರಂತರ ಪ್ರಗತಿ,  ವಿಕಾಸ ಬಯಸುತ್ತದೆ; ವಿಜ್ಞಾನ ಎಷ್ಟೇ ಮುಂದುವರಿಯಲಿ, ಪ್ರಗತಿಯ ವೇಗ ಎಷ್ಟೇ ವೇಗವಾದರೂ, ಭವನಗಳು ಅದೆಷ್ಟೇ ಭವ್ಯವಾಗಿರಲಿ ಆದರೂ ಜೀವನ ಅಪೂರ್ಣವೆನಿಸುತ್ತದೆ; ಆದರೆ ಇದರೊಂದಿಗೆ ಸಂಗೀತ-ಗಾಯನ,ಕಲೆ, ನೃತ್ಯ,ಸಾಹಿತ್ಯ ಬೆರೆತಾಗ ಇದರ ಸೆಳೆತ, ಜೀವಂತಿಕೆ ಬಹಳಷ್ಟು ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com