ನವೆಂಬರ್ ಅಂತ್ಯಕ್ಕೆ ಕೊರ್ಬೆವ್ಯಾಕ್ಸ್ ಲಸಿಕೆ ಬಿಡುಗಡೆ: ಬಯೋಲಾಜಿಕಲ್ ಇ ಲಿಮಿಟೆಡ್

ರಾಷ್ಟ್ರವ್ಯಾಪಿ ನಡೆಯುತ್ತಿರುವ ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡುವುದಕ್ಕೆ ಹೊಸ ಲಸಿಕೆಗಳ ಆಗಮನ ಸಹಕಾರಿಯಾಗಿದೆ. 
ಕೋವಿಡ್-19 ಲಸಿಕೆ ಸಾಂದರ್ಭಿಕ ಚಿತ್ರ
ಕೋವಿಡ್-19 ಲಸಿಕೆ ಸಾಂದರ್ಭಿಕ ಚಿತ್ರ

ಹೈದರಾಬಾದ್: ರಾಷ್ಟ್ರವ್ಯಾಪಿ ನಡೆಯುತ್ತಿರುವ ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡುವುದಕ್ಕೆ ಹೊಸ ಲಸಿಕೆಗಳ ಆಗಮನ ಸಹಕಾರಿಯಾಗಿದೆ. 

ಈಗಿರುವುದರ ಜೊತೆಗೆ ಇನ್ನೂ ಹಲವು ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿದ್ದು, ಈ ಪೈಕಿ ಬಯೋಲಾಜಿಕಲ್ ಇ ಲಿಮಿಟೆಡ್ ನ ಕೊರ್ಬೆವ್ಯಾಕ್ಸ್ ಲಸಿಕೆಯೂ ಒಂದಾಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಬಯೋಲಾಜಿಕಲ್ ಇ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಮಹಿಮಾ ದತ್ಲಾ,  ನವೆಂಬರ್ ಮಾಸಾಂತ್ಯಕ್ಕೆ ಕೊರ್ಬೆವ್ಯಾಕ್ಸ್ ಲಸಿಕೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. 

ಬಿಡುಗಡೆಯ ದಿನಾಂಕದಂದು 10 ಕೋಟಿ ಲಸಿಕೆ ಪೂರೈಕೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ನವೆಂಬರ್ ಮಾಸಾಂತ್ಯಕ್ಕೆ ಕೋವಿಡ್-19 ಲಸಿಕೆ ಕೊರ್ಬೆವ್ಯಾಕ್ಸ್ ನ ಅಂತಿಮ ಡಾಟಾವನ್ನು ಹಂಚಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

ಸರ್ಕಾರ ಅಕ್ಟೋಬರ್ ತಿಂಗಳಲ್ಲಿ ಬಯೋಲಾಜಿಕಲ್ ಇ ಯಿಂದ ಮೂರನೇ ಹಂತದ ಡೇಟಾವನ್ನು ನಿರೀಕ್ಷಿಸುತ್ತಿತ್ತು ಆದರೆ ಕಚ್ಚಾವಸ್ತುಗಳ ಸಂಗ್ರಹದಲ್ಲಿನ ವಿಳಂಬದಿಂದಾಗಿ ಲಸಿಕೆ ಬಿಡುಗಡೆಯೂ ವಿಳಂಬವಾಗಿದ್ದು, ನವೆಂಬರ್ ವೇಳೆಗೆ ಕೊರ್ಬೆವ್ಯಾಕ್ಸ್ ನ ತುರ್ತು ಬಳಕೆಗೆ ಅನುಮತಿ ಪಡೆಯಲು ಸಂಸ್ಥೆ ಮುಂದಾಗಿದೆ.

ಭಾರತದಲ್ಲಿ ತಯಾರಾಗುತ್ತಿರುವ ಮೂರನೇ ಕೋವಿಡ್-19 ಲಸಿಕೆ ಇದಾಗಿದ್ದು, ಇನ್ನೂ ಎರಡು ಕೋವ್ಯಾಕ್ಸಿನ್ ಹಾಗೂ ಝೈ ಕೋವ್-ಡಿ ದೇಶದಲ್ಲೇ ತಯಾರಾಗಿರುವ ಇನ್ನೆರಡು ಲಸಿಕೆಗಳಾಗಿವೆ. ಸರ್ಕಾರ ಈ ಹಿಂದಿನ ಘೋಷಣೆಯ ಪ್ರಕಾರ ಡಿಸೆಂಬರ್ ವೇಳೆಗೆ 30 ಕೋಟಿ ಡೋಸ್ ಗಳಷ್ಟು ಕೊರ್ಬೆವ್ಯಾಕ್ಸ್ ನ್ನು ಖರೀದಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com