'ಸಮೀರ್ ವಾಂಖೆಡೆ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ': ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೊಸ ಆರೋಪ

ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದು, ಅಧಿಕಾರಿಯ ದುರುಪಯೋಗ, ತಪ್ಪು ಕೆಲಸದ ಬಗ್ಗೆ ಎನ್ ಸಿಬಿಯಲ್ಲಿರುವವರು ಬರೆದಿರುವ ಪತ್ರದ ಪ್ರತಿಯನ್ನು ಸಂಸ್ಥೆಯ ಮುಖ್ಯಸ್ಥರಿಗೆ  ಹಸ್ತಾಂತರಿಸುವುದಾಗಿ ಮಹಾರಾಷ್ಟ್ರ ಸರ್ಕಾರದ ಸಚಿವ ಎನ್ ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.
ಸಮೀರ್ ವಾಂಖೆಡೆ, ನವಾಬ್ ಮಲಿಕ್(ಸಂಗ್ರಹ ಚಿತ್ರ)
ಸಮೀರ್ ವಾಂಖೆಡೆ, ನವಾಬ್ ಮಲಿಕ್(ಸಂಗ್ರಹ ಚಿತ್ರ)

ಮುಂಬೈ: ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದು, ಅಧಿಕಾರಿಯ ದುರುಪಯೋಗ, ತಪ್ಪು ಕೆಲಸದ ಬಗ್ಗೆ ಎನ್ ಸಿಬಿಯಲ್ಲಿರುವವರು ಬರೆದಿರುವ ಪತ್ರದ ಪ್ರತಿಯನ್ನು ಸಂಸ್ಥೆಯ ಮುಖ್ಯಸ್ಥರಿಗೆ  ಹಸ್ತಾಂತರಿಸುವುದಾಗಿ ಮಹಾರಾಷ್ಟ್ರ ಸರ್ಕಾರದ ಸಚಿವ ಎನ್ ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ಮುಂಬೈ ಮತ್ತು ಥಾಣೆಯಲ್ಲಿ ಇಬ್ಬರು ವ್ಯಕ್ತಿಗಳ ಮೂಲಕ ಸಮೀರ್ ವಾಂಖೆಡೆ ಕೆಲವು ವ್ಯಕ್ತಿಗಳ ಮೊಬೈಲ್ ಫೋನ್ ನ್ನು ಅಕ್ರಮವಾಗಿ ಕದ್ದಾಲಿಕೆ ಮಾಡುತ್ತಿದ್ದಾರೆ. ಅಲ್ಲದೆ ಸಮೀರ್ ವಾಂಖೆಡೆ ಪೊಲೀಸರಿಂದ ತಮ್ಮ ಕುಟುಂಬ ಸದಸ್ಯರ ಕರೆ ವಿವರ ದಾಖಲೆಗಳನ್ನು ಕೇಳಿದ್ದಾರೆ ಎಂದರು.

ನಿನ್ನೆ ಮುಂಬೈ ಕೋರ್ಟ್ ಗೆ ಅಫಿಡವಿಟ್ಟು ಸಲ್ಲಿಸಿದ್ದ ಸಮೀರ್ ವಾಂಖೆಡೆ, ಮುಂಬೈ ಡ್ರಗ್ ಕೇಸಿನಲ್ಲಿ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ತನಿಖೆ ನಡೆಸುವುದು ಕೆಲವರಿಗೆ ಇಷ್ಟವಿಲ್ಲದ ಕಾರಣ ತಮಗೆ ಬಂಧನದ ಬೆದರಿಕೆ ನಿರಂತರವಾಗಿ ಬರುತ್ತಿದೆ ಎಂದಿದ್ದರು. ತಮ್ಮ ಮೇಲೆ ವೈಯಕ್ತಿಕವಾದಿ ನವಾಬ್ ಮಲಿಕ್ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ. ಇವರ ಅಳಿಯ ಸಮೀರ್ ಖಾನ್ ನನ್ನು ಬಂಧಿಸಿದ ಒಂದೇ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ವಾಂಖೆಡೆಯವರು ಎನ್ ಸಿಬಿಯಲ್ಲಿ ನಡೆಸುತ್ತಿರುವ ಹಲವು ಅಕ್ರಮಗಳ ಬಗ್ಗೆ ತಮಗೆ ಪತ್ರ ಬರೆದಿದ್ದು ಅದನ್ನು ಸಂಸ್ಥೆಯ ಮುಖ್ಯಸ್ಥ ಡಿಜಿ ಎಸ್ ಎನ್ ಪ್ರಧಾನ್ ಅವರಿಗೆ ಹಸ್ತಾಂತರಿಸುತ್ತೇನೆ. ಪತ್ರದಲ್ಲಿ ಬರೆದಿರುವ 26 ಆರೋಪಗಳ ಬಗ್ಗೆ ಎನ್ ಸಿಬಿ ತನಿಖೆ ಮಾಡಬೇಕು ಎಂದು ಸಚಿವ ನವಾಬ್ ಮಲಿಕ್ ಒತ್ತಾಯಿಸಿದ್ದಾರೆ. 

ಇಂದು ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವಾಬ್ ಮಲಿಕ್ ಸಮೀರ್ ವಾಂಖೆಡೆ ಮುಸ್ಲಿಂ ಜನಾಂಗದಲ್ಲಿ ಹುಟ್ಟಿದವರು ಎಂದು ಪುನರುಚ್ಛರಿಸಿದ್ದಾರೆ. ಸಮೀರ್ ವಾಂಖೆಡೆ ಮುಸ್ಲಿಂ ಜನಾಂಗದಲ್ಲಿ ಹುಟ್ಟಿದವರು ಎಂದು ಹೇಳಲು ನನ್ನಲ್ಲಿ ಎಲ್ಲಾ ದಾಖಲೆಗಳಿವೆ. ಆದರೆ ಅವರು ತಮ್ಮ ಗುರುತನ್ನು ನಕಲಿ ಮಾಡಿ ಪರಿಶಿಷ್ಟ ಜಾತಿ ವಿಭಾಗದಡಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರು. ಕಾನೂನು ಪ್ರಕಾರ, ಇಸ್ಲಾಂಗೆ ಮತಾಂತರವಾದ ದಲಿತರಿಗೆ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಸಮೀರ್ ವಾಂಖೆಡೆಗೆ ಉದ್ಯೋಗಾವಕಾಶ ನಿರಾಕರಿಸಿ ದಲಿತ ಜಾತಿಯ ಅಭ್ಯರ್ಥಿಗೆ ನೀಡಲಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಸದ್ಯದಲ್ಲಿಯೇ ಕಾನೂನು ತನಿಖೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೂಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com