ಸಮೀರ್ ವಾಂಖೆಡೆ ನಂತರ ವಿಜಿಲೆನ್ಸ್ ಮುಖ್ಯಸ್ಥರ ವಿರುದ್ಧ ಆರೋಪ; ಜ್ಞಾನೇಶ್ವರ ಸಿಂಗ್ ವಿರುದ್ಧ ಹರಿಹಾಯ್ದ ಎನ್ ಸಿಪಿ

ಎನ್ ಸಿಬಿ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಜಾಗೃತ ದಳ ಅಧಿಕಾರಿ ಜ್ಞಾನೇಶ್ವರ್ ಸಿಂಗ್ ವಿರುದ್ಧ ಎನ್ ಸಿಪಿ ಇದೀಗ ಹರಿಹಾಯ್ದಿದೆ. ಇಷ್ಟು ದಿನ ಎನ್ ಸಿಪಿ ನಾಯಕ ನವಾಬ್ ಮಲಿಕ್ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿದ್ದರು.
ದೆಹಲಿಯ ಎನ್ ಸಿಬಿ ಕಚೇರಿಯಲ್ಲಿ ಸಮೀರ್ ವಾಂಖೆಡೆ
ದೆಹಲಿಯ ಎನ್ ಸಿಬಿ ಕಚೇರಿಯಲ್ಲಿ ಸಮೀರ್ ವಾಂಖೆಡೆ

ಮುಂಬೈ: ಎನ್ ಸಿಬಿ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿರುವ ಜಾಗೃತ ದಳ ಅಧಿಕಾರಿ ಜ್ಞಾನೇಶ್ವರ್ ಸಿಂಗ್ ವಿರುದ್ಧ ಎನ್ ಸಿಪಿ ಇದೀಗ ಹರಿಹಾಯ್ದಿದೆ. ಇಷ್ಟು ದಿನ ಎನ್ ಸಿಪಿ ನಾಯಕ ನವಾಬ್ ಮಲಿಕ್ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದಿದ್ದರು.

ಸಮೀರ್ ವಾಂಖೆಡೆಯನ್ನು ಈ ಹಿಂದೆ ಜ್ಞಾನೇಶ್ವರ್ ಸಿಂಗ್ ರಕ್ಷಿಸುತ್ತಿದ್ದರು, ಎನ್ ಸಿಬಿ ಅಧಿಕಾರಿಗಳ ಕಾರ್ಯವೈಖರಿಯನ್ನು ಬೆಂಬಲಿಸುತ್ತಿದ್ದುದು ಮಾತ್ರವಲ್ಲದೆ ಸಮೀರ್ ವಾಂಖೆಡೆಯನ್ನು ರಕ್ಷಿಸುತ್ತಿದ್ದರು. ಹೀಗಿರುವಾಗ ಡ್ರಗ್ ಕೇಸಿನಲ್ಲಿ ನ್ಯಾಯಸಮ್ಮತ ತನಿಖೆಯನ್ನು ನಾವು ನಿರೀಕ್ಷಿಸಲು ಸಾಧ್ಯವೇ ಎಂದು ಎನ್ ಸಿಪಿ ವಕ್ತಾರ ಸಂಜಯ್ ತಟ್ಕರೆ ಕೇಳಿದ್ದಾರೆ.

ಜ್ಞಾನೇಶ್ವರ್ ಸಿಂಗ್ ನೇತೃತ್ವದಲ್ಲಿ ಎನ್ ಸಿಬಿ ಐವರ ತಂಡ ರಚಿಸಿ ವಾಂಖೆಡೆ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ. ನಿನ್ನೆ ಹೇಳಿಕೆ ನೀಡಿದ್ದ ಎನ್ ಸಿಪಿ ಸಚಿವ ನವಾಬ್ ಮಲಿಕ್, ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಹಲವು ಕೇಂದ್ರ ತನಿಖಾ ಸಂಸ್ಥೆಗಳು ದುರುದ್ದೇಶಪೂರಿತವಾಗಿ ನಡೆದುಕೊಳ್ಳುತ್ತಿವೆ ಎಂದು ಪ್ರಧಾನ ಮಂತ್ರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರ ಬರೆಯಲಿದ್ದಾರೆ ಎಂದು ಹೇಳಿದರು.

ದೇಶದ ಜಿಡಿಪಿಗೆ ಶೇಕಡಾ 2ರಿಂದ 3ರಷ್ಟು ಕೊಡುಗೆ ನೀಡುವ ಬಾಲಿವುಡ್ ಚಿತ್ರರಂಗದಿಂದ ಇಂತಹ ಬೆಳವಣಿಗೆಗಳಾದರೆ ಅದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಮಲಿಕ್ ಪ್ರಶ್ನಿಸಿದ್ದಾರೆ. 

ನಿನ್ನೆ ಮತ್ತೊಂದು ಬೆಳವಣಿಗೆಯಲ್ಲಿ ಬಾಂಬೆ ಹೈಕೋರ್ಟ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿತ್ತು.

ನಿನ್ನೆ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿದ್ದ ಸಮೀರ್ ವಾಂಖೆಡೆ ಪತ್ನಿ ಕ್ರಾಂತಿ ರೆಡ್ಕರ್, ತಮಗೆ ಬೆದರಿಕೆ ಕರೆಗಳು ಮತ್ತು ಆನ್ ಲೈನ್ ನಲ್ಲಿ ನಿಂದನಾತ್ಮಕ ಮಾತುಗಳು ಕೇಳಿಬರುತ್ತಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com