ಸಮೀರ್ ವಾಂಖೆಡೆ ವಿರುದ್ಧ ಲಂಚ ಬೇಡಿಕೆ ಆರೋಪ: ಎನ್ ಸಿಬಿ ಅಧಿಕಾರಿಗಳು ಮುಂಬೈಗೆ ಆಗಮನ, ಪೊಲೀಸರಿಂದ ತನಿಖೆ ಆರಂಭ

ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಜೈಲಿನಿಂದ ಬಿಡುಗಡೆ ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನಿಖೆ ನಡೆಸಲು ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿ ಮಿಲಿಂದ್ ಖೆಟ್ಲೆ ಅವರನ್ನು ನೇಮಿಸಿದ್ದಾರೆ.
ದೆಹಲಿಯ ಎನ್ ಸಿಬಿ ಕಚೇರಿಗೆ ಆಗಮಿಸಿದ ಸಮೀರ್ ವಾಂಖೆಡೆ
ದೆಹಲಿಯ ಎನ್ ಸಿಬಿ ಕಚೇರಿಗೆ ಆಗಮಿಸಿದ ಸಮೀರ್ ವಾಂಖೆಡೆ

ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಜೈಲಿನಿಂದ ಬಿಡುಗಡೆ ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನಿಖೆ ನಡೆಸಲು ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿ ಮಿಲಿಂದ್ ಖೆಟ್ಲೆ ಅವರನ್ನು ನೇಮಿಸಿದ್ದಾರೆ.

ಸಮೀರ್ ವಾಂಖೆಡೆ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ಆರೋಪಗಳ ಬಗ್ಗೆ ಖೆಟ್ಲೆ ತನಿಖೆ ನಡೆಸಲಿದ್ದಾರೆ. ಮುಂಬೈಯ ನಾಲ್ಕು ಪೊಲೀಸ್ ಠಾಣೆಗಳಿಗೆ ದೂರು ಬಂದಿದೆ. ಆದರೆ ಪೊಲೀಸರು ಇದುವರೆಗೆ ವಾಂಖೆಡೆ ವಿರುದ್ಧ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. 

ಮುಂಬೈ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಕಿರಣ್ ಗೋಸಾವಿಯ ಖಾಸಗಿ ಬಾಡಿಗಾರ್ಡ್ ಆಗಿರುವ ಪ್ರಭಾಕರ್ ಸೈಲ್, ವಾಂಖೆಡೆ, ಗೋಸಾವಿ ಮತ್ತು ಇತರ ಕೆಲವು ಎನ್ ಸಿಬಿ ಅಧಿಕಾರಿಗಳು ಹಣದ ಬೇಡಿಕೆಯಿಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. 

ಆದರೆ ವಾಂಖೆಡೆ ವಿರುದ್ಧ ಯಾವ ರೀತಿ ದೂರನ್ನು ಪಡೆಯಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿಲ್ಲ, ಈ ಮಧ್ಯೆ, ಪ್ರಭಾಕರ್ ಸೈಲ್ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಎನ್ ಸಿಬಿಯ ಐವರು ಅಧಿಕಾರಿಗಳ ತಂಡ ಮುಂಬೈಗೆ ಇಂದು ತಲುಪಿದ್ದು ಲಂಚ ಆರೋಪದ ತನಿಖೆ ನಡೆಸಲಿದೆ. ಎನ್ ಸಿಬಿಯ ಉಪ ಮಹಾ ನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ ಸಿಂಗ್ ಮತ್ತು ಇತರ ನಾಲ್ವರು ತನಿಖೆ ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com