ಬಿಜೆಪಿ ಮತ್ತು ಬಂಡಾಯ ಅಕಾಲಿ ನಾಯಕರೊಂದಿಗೆ ಮೈತ್ರಿಗೆ ಮುಕ್ತ: ಪಕ್ಷ ರಚನೆ ಘೋಷಣೆ ನಂತರ ಕ್ಯಾ.ಅಮರಿಂದರ್ ಸಿಂಗ್ ಹೇಳಿಕೆ

ಹೊಸ ಪಕ್ಷ ರಚನೆಯಾದ ಕೂಡಲೇ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳದ ಬಂಡಾಯರ ಜೊತೆಗೆ ಸೀಟು ಹಂಚಿಕೆ ವಿಚಾರದಲ್ಲಿ ಮುಕ್ತನಾಗಿದ್ದೇನೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕ್ಯಾ.ಅಮರಿಂದರ್ ಸಿಂಗ್
ಕ್ಯಾ.ಅಮರಿಂದರ್ ಸಿಂಗ್

ಚಂಡೀಗಢ: ಹೊಸ ಪಕ್ಷ ರಚನೆಯಾದ ಕೂಡಲೇ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳದ ಬಂಡಾಯರ ಜೊತೆಗೆ ಸೀಟು ಹಂಚಿಕೆ ವಿಚಾರದಲ್ಲಿ ಮುಕ್ತನಾಗಿದ್ದೇನೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಕುರಿತು ತಾವು ಯಾವಾಗಲೂ ಮಾತನಾಡಿಯೇ ಇಲ್ಲ ಎಂದಿರುವ ಅವರು, ಸೀಟು ಹಂಚಿಕೆ ಮಾಡಿಕೊಳ್ಳಲು ತಮಗೆ ಇಚ್ಛೆಯಿದೆ ಎಂದಿದ್ದಾರೆ. ಶಿರೋಮಣಿ ಅಕಾಲಿ ದಳ ಜೊತೆ ಕೂಡ ಮೈತ್ರಿ ಮಾಡಿಕೊಳ್ಳುವ ಉದ್ದೇಶವಿಲ್ಲ ಆದರೆ ಬಂಡಾಯ ನಾಯಕರ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಲು ಇಚ್ಛೆಯಿದೆ ಎಂದಿದ್ದಾರೆ.

ಪಂಜಾಬ್ ನಲ್ಲಿ ಈಗ ಕಾಂಗ್ರೆಸ್ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ, ತಮ್ಮ ಹೋರಾಟ ಕೇವಲ ಶಿರೋಮಣಿ ಅಕಾಲಿ ದಳದ ಜೊತೆಗೆ ಮಾತ್ರ ಎಂದರು. ಕ್ಷುಲ್ಲಕ ಕಾರಣಕ್ಕೆ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ನವಜೋತ್ ಸಿಂಗ್ ಸಿಧು ಮತ್ತು ಸುಖಿಂದರ್ ರಾಂಧವ ಜೊತೆ ಹರಿಹಾಯ್ದರು. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಧು ಅವರು ಎಲ್ಲೇ ಸ್ಪರ್ಧಿಸಿದರೂ ನಾವು ಅವರ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸುತ್ತೇವೆ ಎಂದು ಅವರು ಪ್ರತಿಜ್ಞೆ ಮಾಡಿದರು, ಪಂಜಾಬ್ ನಲ್ಲಿ ಜನಪ್ರಿಯತೆ ಶೇಕಡಾ 25ರಷ್ಟು ಕಡಿಮೆಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com