ವಿಧಿಯ ಕ್ರೂರತೆ ಪುನೀತ್ ರಾಜ್‌ಕುಮಾರ್ ಎಂಬ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ: ಪ್ರಧಾನಿ ಮೋದಿ ಸಂತಾಪ 

ವಿಧಿ ಇಂದು ಕ್ರೂರತೆ ಮೆರೆದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಪುನೀತ್ ರಾಜ್ ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ
ಪ್ರಧಾನಿ ಮೋದಿ ಜೊತೆಗೆ ಪುನೀತ್ ರಾಜ್ ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ
Updated on

ನವದೆಹಲಿ: ವಿಧಿ ಇಂದು ಕ್ರೂರತೆ ಮೆರೆದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ಅವರದ್ದು ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂದಿನ ಜನಾಂಗ ಅವರ ನಟನೆ ಮತ್ತು ಅದ್ಭುತ ವ್ಯಕ್ತಿತ್ವ ಮೂಲಕ ನೆನಪು ಮಾಡಿಕೊಳ್ಳಲಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com