ಸಾವರ್ಕರ್ ವಿರುದ್ಧದ ಹೇಳಿಕೆ: ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ನಕಾರ 

ಮಹಾತ್ಮಾ ಗಾಂಧಿ ಅವರ ಹತ್ಯೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದರು ಎಂಬ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ಕೆಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ. 
ಓವೈಸಿ
ಓವೈಸಿ

ನವದೆಹಲಿ: ಮಹಾತ್ಮಾ ಗಾಂಧಿ ಅವರ ಹತ್ಯೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದರು ಎಂಬ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ಕೆಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ. 

ಸಾವರ್ಕರ್ ವಿರುದ್ಧದ ಹೇಳಿಕೆ ನೀಡಿದ್ದ ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಿ ಚಿಂತಕರ ಚಾವಡಿಯೊಂದು ಅಡ್ವೊಕೇಟ್ ಜನರಲ್ ಗೆ ಪತ್ರ ಬರೆದಿತ್ತು.

ಈ ಪತ್ರಕ್ಕೆ ವೇಣುಗೋಪಾಲ್ ಅವರು ಪ್ರತಿಕ್ರಿಯೆ ನೀಡಿದ್ದು, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕೋರ್ಟ್ ನ್ಯಾ.ಕಪೂರ್ ಅಯೋಗದ ತನಿಖೆಯ ಅಂಶಗಳೆಡೆಗೆ ಒಲವು ತೋರಲಿಲ್ಲ. ಓವೈಸಿ ಅವರ ಹೇಳಿಕೆ ಕಪೂರ್ ಆಯೋಗದ ಅಂಶಗಳಿಗೆ ಸಂಬಂಧಿಸಿದ್ದಾಗಿರಬಹುದು ಆದ್ದರಿಂದ ಓವೈಸಿ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ತರುವುದು ಕಷ್ಟವಾಗಬಹುದು" ಎಂದು ವೇಣುಗೋಪಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com