ಕಾಂಡೋಮ್ ಸಿಕ್ಕ ಮಾತ್ರಕ್ಕೆ ಒಪ್ಪಿತ ಲೈಂಗಿಕ ಸಂಬಂಧ ಅಲ್ಲ: ಮುಂಬೈ ಕೋರ್ಟ್

ಪತಿಯ ಸ್ನೇಹಿತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಕೃತ ಬುದ್ದಿಯನ್ನು ತೋರಿಸಿದ್ದಾನೆ ಎಂದು ಮಹಿಳೆಯೊಬ್ಬರು (ಸಹೋದ್ಯೋಗಿಯ ಪತ್ನಿ) ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪತಿಯ ಸ್ನೇಹಿತನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಪತಿಯ ಸ್ನೇಹಿತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಕೃತ ಬುದ್ದಿಯನ್ನು ತೋರಿಸಿದ್ದಾನೆ ಎಂದು ಮಹಿಳೆಯೊಬ್ಬರು (ಸಹೋದ್ಯೋಗಿಯ ಪತ್ನಿ) ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪತಿಯ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಆದರೆ ತನ್ನನ್ನು ಅನ್ಯಾಯವಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಸದರಿ ಆರೋಪಿ ಮಾಡಿರುವ ಆರೋಪಗಳು ತೀವ್ರ ಚರ್ಚೆಯ ವಿಷಯವಾಗಿದೆ.

ಮಹಿಳೆ ತನ್ನೊಂದಿಗೆ ಸ್ವಯಂ ಪ್ರೇರಣೆಯಿಂದ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದಳು ಎಂದು ಹೇಳಲು ಘಟನೆ ನಡೆದ ಸ್ಥಳದಲ್ಲಿ ಕಂಡು ಬಂದ ಕಾಂಡೋಮ್ ಪ್ರಮುಖ ಪುರಾವೆ ಎಂದು ಎಂದು ಆತ ವಾದಿಸಿದ್ದಾನೆ. ಹಾಗಾಗಿ ತನಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ.

ಈ ಪ್ರಕರಣ ಮುಂಬೈನಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದಿದೆ. ಕಳೆದ ಶನಿವಾರ, ಮುಂಬೈ ಸೆಷನ್ಸ್ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಘಟನೆ ನಡೆದ ಸ್ಥಳದಲ್ಲಿ ಕೇವಲ ಕಾಂಡೋಮ್‌ ಸಿಕ್ಕಿದ ಮಾತ್ರಕ್ಕೆ ಮಹಿಳೆ ಇಷ್ಟ ಪಟ್ಟು ಸಂಬಂಧ ಹೊಂದಿದ್ದಳು ಎಂದು ಹೇಳುವುದು ಸರಿಯಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಭವಿಷ್ಯದ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಆರೋಪಿ ಉದ್ದೇಶ ಪೂರ್ವಕವಾಗಿಯೇ ಕಾಂಡಮ್‌ ಅನ್ನು ಸಂತ್ರಸ್ತೆಯ ಮನೆಯಲ್ಲಿ ಇಟ್ಟಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಿಗೆ ದೋಷಾರೋಪ ಪಟ್ಟಿ ಒದಗಿಸುವ ಮೂಲಕ ವಿಚಾರಣೆ ಮುಗಿಸಿದ್ದು, ನ್ಯಾಯಾಲಯ ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿದೆ.

ಅಲ್ಲಿ ನಿಜವಾಗಿಯೂ ನಡೆದಿದ್ದು ಏನೆಂದರೆ.. ಮುಂಬೈನ ನೌಕಾಪಡೆಯ ಒಬ್ಬ ಅಧಿಕಾರಿ ತನ್ನ ಪತ್ನಿಯೊಂದಿಗೆ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದರು. ಅಧಿಕಾರಿಯ ಸಹೋದ್ಯೋಗಿ, ಸ್ನೇಹಿತ ಕೂಡ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಈ ಕ್ರಮದಲ್ಲಿ ಏಪ್ರಿಲ್ 29 ರಂದು ಮಹಿಳೆಯ ಪತಿ ತರಬೇತಿಗಾಗಿ ಕೇರಳಕ್ಕೆ ಹೋಗಿದ್ದರು. ಇದರಿಂದಾಗಿ ಮನೆಯಲ್ಲಿ ಆಕೆ ಒಂಟಿಯಾಗಿದ್ದರು. ಆ ಸಮಯದಲ್ಲಿ ಪತಿಯ ಸ್ನೇಹಿತ ಮನೆಗೆ ಬಂದು ತನಗೆ ಚಾಕೊಲೇಟ್ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಳು. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿದ್ದರಿಂದ ಆರೋಪಿಯ ಮನೆಗೆ ಹೋಗಿದ್ದಾಗಿ ಆಕೆ ಹೇಳಿದ್ದಳು. ನಂತರ ಆರೋಪಿ ತನಗೆ ಪ್ಯಾರಸಿಟಮಾಲ್ ಮಾತ್ರೆ ನೀಡಿದ್ದ, ನಂತರ ತನ್ನ ಮೇಲೆ ಬಲತ್ಕಾರದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿದ್ದರು.

ಮಾರನೇ ದಿನ.. ತನಗಾದ ಅನ್ಯಾಯದ ಬಗ್ಗೆ ಪತ್ನಿಗೆ ಹೇಳಿಕೊಂಡಿದ್ದು, ವಿಷಯ ತಿಳಿದ ಕೂಡಲೇ ಪತಿ ಮುಂಬೈಗೆ ಮರಳಿದರು. ನಂತರ ಆಕೆ, ಸದರಿ ನೌಕಾಪಡೆ ಅಧಿಕಾರಿ ತನ್ನ ವಿರುದ್ದ ಅತ್ಯಾಚಾರ ನಡೆಸಿದ್ದಾನೆ ಎಂದು ಎಫ್ಐಆರ್ ದಾಖಲಿಸಿದ್ದಳು. ಆದರೆ, ಆರೋಪಿ ಪರ ವಕೀಲರು ಕೃತ್ಯ ನಡೆದ ಸ್ಥಳದಲ್ಲಿ ಕಾಂಡೋಮ್ ಪತ್ತೆಯಾಗಿದ್ದು. ಇದರಿಂದ ಆಕೆ ಇಷ್ಟ ಪಟ್ಟು ಸಂಬಂಧ ಇರಿಸಿಕೊಂಡಿದ್ದಳು ಎಂದು ಅರ್ಥವಾಗುತ್ತದೆ ಎಂದು ದೂರಿದ್ದಾರೆ. ಆದರೆ ಸೆಷನ್ಸ್‌ ಕೋರ್ಟ್‌ ಅವರ ವಾದವನ್ನು ತಳ್ಳಿಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com