ಸಾಂದರ್ಭಿಕ ಚಿತ್ರ
ದೇಶ
ಜಾನುವಾರುಗಳ ಕೃತಕ ಸಂತಾನೋತ್ಪತ್ತಿ ಕ್ರೂರ ಕೃತ್ಯ: ಮದ್ರಾಸ್ ಹೈಕೋರ್ಟ್
ಆರ್ಟಿಫಿಷಿಯಲ್ ಇನ್ಸೆಮಿನೇಶನ್ ಪ್ರಕ್ರಿಯೆ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ
ಚೆನ್ನೈ: ಕೃತಕ ಸಂತಾನೋತ್ಪತ್ತಿಯಿಂದ ಜಾನುವಾರುಗಳು ಸಂಭೋಗ ಪ್ರಕ್ರಿಯೆಯ ಮೇಲೆ ಆಸಕ್ತಿ ಕಳೆದುಕೊಳ್ಳುತ್ತವೆ ಎನ್ನುವ ಸಂಗತಿಯನ್ನು ಮನಗಂಡ ಮದ್ರಾಸ್ ಹೈಕೋರ್ಟ್, ಆರ್ಟಿಫಿಷಿಯಲ್ ಇನ್ಸೆಮಿನೇಶನ್ ಪ್ರಕ್ರಿಯೆಯನ್ನು ಕ್ರೂರ ಕೃತ್ಯ ಎಂದು ಕರೆದಿದೆ. ಈ ಕೃತ್ಯ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಿಳಿಸಿದೆ.
ನೈಸರ್ಗಿಕವಾಗಿ ಸಂತಾನೋತ್ಪತ್ತಿ ಮಾಡುವ ಉದ್ದೇಶಕ್ಕೆ ಹೋರಿಗಳನ್ನು ಬಳಸಿಕೊಳ್ಳುವುದನ್ನು ನ್ಯಾಯಾಲಯ ಸಮರ್ಪಕವಾದ ವಿಧಾನ ಎಂದು ಪರಿಗಣಿಸಿದೆ.
ನೈಸರ್ಗಿಕವಾಗಿ ಮಿಲನ ಹೊಂದುವುದು ಜಾನುವಾರುಗಳ ಹಕ್ಕು ಎಂದಿರುವ ಮದ್ರಾಸ್ ಹೈಕೋರ್ಟ್, ಅವುಗಳನ್ನು ಸಂತಾನೋತ್ಪತ್ತಿ ಮಾಡುವ ಯಂತ್ರಗಳನ್ನಾಗಿ ನೋಡಬಾರದು ಎಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ