1,819 ಕೋಟಿ ರೂ. ಮೌಲ್ಯದ ಅತಿ ದೊಡ್ಡ ನಕಲಿ GST ವಂಚನೆ ಜಾಲ ಪತ್ತೆ: ಇಬ್ಬರ ಬಂಧನ

ಈ ಕಳ್ಳ ಜಾಲದ ಮಾಸ್ಟರ್ ಮೈಂಡ್ ಅಮಿತ್ ಕುಮಾರ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಂಚನೆ ಜಾಲ ಒಡಿಶಾಗೆ ಮಾತ್ರ ಸೀಮಿತವಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ 1819 ಕೋಟಿ ರೂ. ನಕಲಿ ಜಿ ಎಸ್ ಟಿ ವಂಚನೆ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದೇಶ ಕಂಡ ಅತಿ ದೊಡ್ಡ ನಕಲಿ ಜಿ ಎಸ್ ಟಿ ವಂಚನೆ ಜಾಲ ಎನ್ನುವ ಕುಖ್ಯಾತಿಗೆ ಈ ಪ್ರಕರಣ ಪಾತ್ರವಾಗಿದೆ. 

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆರೋಪಿಗಳು ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಮೇಲೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. 

ಆರೋಪಿಗಳು ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಖರೀದಿ ರಶೀದಿಗಳನ್ನು ಸೃಷ್ಟಿಸುತ್ತಿದ್ದರು. ಈ ಕಳ್ಳ ಜಾಲದ ಮಾಸ್ಟರ್ ಮೈಂಡ್ ಅಮಿತ್ ಕುಮಾರ್ ಎಂಬ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ನಿರ್ವಹಿಸುತ್ತಿದ್ದಾನೆ. ಬಂಧಿತರಲ್ಲಿ ಆತನೂ ಸೇರಿದ್ದಾನೆ.

ಈತನ ವಂಚನೆ ಜಾಲ ಒಡಿಶಾಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಹಲವು ರಾಜ್ಯಗಳಿಗೂ ಹರಡಿರುವುದಾಗಿ ಇಡಿ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್ ಗಢ ಮತ್ತು ದೆಹಲಿಗೂ ಈತನ ಜಾಲ ಹರಡಿರುವುದು ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com