ದೆಹಲಿಯ ಸುಮಾರು 3 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಆರ್ಥಿಕ ನೆರವು: ಉಪ ಮುಖ್ಯಮಂತ್ರಿ ಸಿಸೋಡಿಯಾ

ಶಾಲಾ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯತೆ ಬೆಳೆಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರದ ಸೀಡ್ ಮನಿ ಪ್ರಾಜೆಕ್ಟ್ ಅಡಿಯಲ್ಲಿ ಸರ್ಕಾರಿ ಶಾಲೆಯ  ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಆರ್ಥಿಕ ನೆರವನ್ನು ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಮನೀಷ್  ಸಿಸೋಡಿಯಾ ಸೋಮವಾರ ಪ್ರಕಟಿಸಿದರು.
ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ
ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ

ನವದೆಹಲಿ: ಶಾಲಾ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯತೆ ಬೆಳೆಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರದ ಸೀಡ್ ಮನಿ ಪ್ರಾಜೆಕ್ಟ್ ಅಡಿಯಲ್ಲಿ ಸರ್ಕಾರಿ ಶಾಲೆಯ  ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಆರ್ಥಿಕ ನೆರವನ್ನು ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಮನೀಷ್  ಸಿಸೋಡಿಯಾ ಸೋಮವಾರ ಪ್ರಕಟಿಸಿದರು. ಈ ಉಪ್ರಕ್ರಮದ ಅಡಿಯಲ್ಲಿ ದೆಹಲಿಯಾದ್ಯಂತ 1 ಸಾವಿರ ಸರ್ಕಾರಿ ಶಾಲೆಗಳ 3 ಲಕ್ಷದ 50 ಸಾವಿರ ಸರ್ಕಾರಿ ಶಾಲೆಯ ಮಕ್ಕಳಿಗೆ 2 ಸಾವಿರ ರೂ. ನೀಡಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ದೆಹಲಿ ಸರ್ಕಾರ ಎರಡು ವರ್ಷಗಳ ಹಿಂದೆ ಉದ್ಯಮಶೀಲತೆ ಮನಸ್ಥಿತಿಯ ಪಠ್ಯಕ್ರಮವನ್ನು ಪ್ರಾರಂಭಿಸಲಾಗಿತ್ತು. ಇದು ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳಿಗಿಂತಲೂ ಉದ್ಯೋಗ ನೀಡುವ ಗುರಿಯನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಈ ಪಠ್ಯಕ್ರಮ ಭಾರೀ ಪ್ರಭಾವವನ್ನುಂಟು ಮಾಡಿದೆ. ಒಬ್ಬ ವಿದ್ಯಾರ್ಥಿ ಮಾಸ್ಕ್ ತಯಾರಿಸುವುದನ್ನು ಪ್ರಾರಂಭಿಸಿದರೆ, ಇನ್ನೊಬ್ಬರು ಯೋಗವನ್ನು ಕಲಿಸಲು ಆರಂಭಿಸಿದರು. 12 ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿ ಕಾಜಲ್ ತಾನೇ  ಸ್ವಂತದ್ದಾಗಿ ಅಕೌಂಟಿಂಗ್ ಕಂಪನಿ ಸ್ಥಾಪಿಸಿ,  20 ಜನರಿಗೆ ಉದ್ಯೋಗ ನೀಡುತ್ತಿದ್ದಾಳೆ, ಆಕೆ 15 ಲಕ್ಷ ರೂ. ವಹಿವಾಟು ನಡೆಸುತ್ತಿದ್ದಾಳೆ. ಈ ಪಠ್ಯ ಕ್ರಮದ ಪ್ರಮುಖ ಅಂಶ ಸೀಡ್ ಮನಿ  ಪ್ರಾಜೆಕ್ಟ್ ಆಗಿದೆ ಎಂದರು.

ಕಿಚ್ಡಿಪುರದ ಶಾಲೆಯೊಂದರಲ್ಲಿ ಪೈಲಟ್ ಯೋಜನೆಯಾಗಿ ಸೀಡ್ ಮನಿ ಪ್ರಾಜೆಕ್ಟ್ ಆರಂಭಿಸಿ  1 ಸಾವಿರ ರೂ. ನೀಡಲಾಗುತಿತ್ತು. ಇದರಿಂದ ಮಕ್ಕಳು ಸ್ವಂತ ವ್ಯವಹಾರ ಆರಂಭಿಸುತ್ತಿದ್ದರು. ಇದೇ ಶಾಲೆಯ 41 ಮಕ್ಕಳು ಒಂಬತ್ತು ಗುಂಪುಗಳನ್ನು ರಚಿಸುವ ಮೂಲಕ  ಸೀಡ್ ಮನಿ ಹೂಡಿಕೆ ಆರಂಭಿಸಿದರು. ಎಲ್ಲರೂ ಲಾಭದಲ್ಲಿ ಮುಂದುವರೆಯುತ್ತಿರುವುದಾಗಿ. ಇದು ನಿರುದ್ಯೋಗಕ್ಕೆ ಪರಿಹಾರವಾಗಲಿದ್ದು, ದೇಶಕ್ಕೆ ಅಗತ್ಯವಾಗಿದೆ ಎಂದು ಅವರು ಹೇಳಿದರು. 

ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ಕಿಚ್ಡಿಪುರದ ಶಾಲೆಯ ಮಕ್ಕಳಿಗೆ ತಲಾ 1 ಸಾವಿರ ಸೀಡ್  ನೀಡಲಾಗುತಿತ್ತು. ಇದನ್ನುಇದೀಗ 2 ಸಾವಿರ ರೂ. ಗೆ ಹೆಚ್ಚಿಸಲಾಗಿದೆ. ಮಂಗಳವಾರದಿಂದ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸೀಡ್ ಮನಿ ಪ್ರಾಜೆಕ್ಟ್ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com