ಜಮ್ಮು-ಕಾಶ್ಮೀರದಲ್ಲಿ 1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ ಪತ್ತೆ! 

ಜಮ್ಮು-ಕಾಶ್ಮೀರದಲ್ಲಿ 1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ ಪತ್ತೆಯಾಗಿದ್ದು, ಗತ ವೈಭವವನ್ನು ಸಾರುತ್ತಿದೆ.
1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ
1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 1,200 ವರ್ಷ ಹಳೆಯ ದುರ್ಗಾ ಮಾತೆ ವಿಗ್ರಹ ಪತ್ತೆಯಾಗಿದ್ದು, ಗತ ವೈಭವವನ್ನು ಸಾರುತ್ತಿದೆ.

ಕಪ್ಪು ಶಿಲೆಯಲ್ಲಿ 6"x 08" ಅಳತೆಯಲ್ಲಿ ಈ ವಿಗ್ರಹವನ್ನು ಕೆತ್ತಲಾಗಿರುವ ನಾಲ್ವರು ಅಂಗರಕ್ಷಕರೊಂದಿಗೆ ಸಿಂಹಾಸನದಲ್ಲಿ ಕುಳಿತಿರುವ ಭಂಗಿಯಲ್ಲಿದೆ. ಸ್ಥಳೀಯ ಕೂಲಿ ಕಾರ್ಮಿಕನೋರ್ವ ನದಿಯಿಂದ ಮರಳು ತೆಗೆಯುತ್ತಿದ್ದಾಗ ಈ ವಿಗ್ರಹ ಪತ್ತೆಯಾಗಿದೆ.

ಆರ್ಕೈವ್ಸ್, ಆರ್ಕಿಯಾಲಜಿ ಮತ್ತು ಮ್ಯೂಸಿಯಂಗಳ ಇಲಾಖೆಯ ಅಧಿಕಾರಿ ಮುಸ್ತಾಕ್ ಅಹ್ಮದ್ ಬೇಗ್ ಮಾತನಾಡಿ, " ತಜ್ಞರ ಪರೀಕ್ಷೆಯ ಸಮಯದಲ್ಲಿ ದೇವಿ ದುರ್ಗೆಯ ವಿಗ್ರಹ 7-8 ನೇ ಶತಮಾನ (1,200 ವರ್ಷಗಳ ಹಿಂದಿನದ್ದು) ಎಂಬುದು ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಶಿಲ್ಪದ ವಿವರಗಳನ್ನು ನೀಡಿರುವ ಬೇಗ್, "ಎರಡು ಕೈಗಳಿರುವ ದುರ್ಗೆಯ ವಿಗ್ರಹ ಹಿಂಬದಿಯಲ್ಲಿ ಎರಡು ಪಿಲ್ಲರ್ ಗಳಿದ್ದು, ಕೈಗಳಲ್ಲಿ ಕಮಲ, ಚಕ್ರಗಳಿವೆ. "ದುರ್ಗೆ ಹಾರ ಮತ್ತು ಕಿರೀಟಗಳನ್ನು ಧರಿಸಿದ್ದು, ಕಪ್ಪು ಶಿಲೆಯ ವಿಗ್ರಹವಾಗಿದ್ದು, ಇದು ಸ್ಥಳೀಯವಾಗಿ ಸಿಗುವ ಶಿಲೆಯಾಗಿದೆ".

"ಕಣಿವೆಯಲ್ಲಿ ಶಿಲ್ಪಕಲೆ ಪುರಾತನವಾದ ಕಲೆಯಾಗಿದ್ದು ಇಂದಿಗೂ ಇಲ್ಲಿನ ಜನರು ಈ ಕಲೆಯನ್ನು ಜೀವಂತವಾಗಿರಿಸಿದ್ದಾರೆ. ಶಿಲ್ಪಾಕೃತಿ ಅತ್ಯಮೂಲ್ಯವಾಗಿದ್ದಾಗಿದ್ದು ಎಸ್ ಪಿಎಸ್ ಮ್ಯೂಸಿಯಂ ನಲ್ಲಿಡುವುದಾಗಿ ಮುಸ್ತಾಕ್ ಅಹ್ಮದ್ ಬೇಗ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com