ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ ಆರು ಜನ ನಾಪತ್ತೆ; ಶೋಧ ಕಾರ್ಯಾಚರಣೆ ಆರಂಭ
ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಬುಧವಾರ ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 08th September 2021 09:17 PM | Last Updated: 09th September 2021 01:15 PM | A+A A-

ಸಾಂದರ್ಭಿಕ ಚಿತ್ರ
ಮಿರ್ಜಾಪುರ: ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಬುಧವಾರ ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಣಿಯಲ್ಲಿ ಒಟ್ಟು 14 ಜನರಿದ್ದರು ಮತ್ತು ಅವರಲ್ಲಿ 8 ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಆದರೆ ಅಖರಾ ಘಾಟ್ ಬಳಿ ನಡೆದ ಘಟನೆಯ ನಂತರ ಮೂವರು ಮಹಿಳೆಯರು ಮತ್ತು ಅನೇಕ ಮಕ್ಕಳು ಕಾಣೆಯಾಗಿದ್ದಾರೆ ಎಂದು ವಿಂಧ್ಯಾಚಲ ಪೊಲೀಸ್ ಠಾಣೆಯ ಹಿರಿಯ ಸಬ್ ಇನ್ಸ್‌ಪೆಕ್ಟರ್(ಎಸ್‌ಎಸ್‌ಐ) ಅಖಿಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಅವರಲ್ಲಿ ಹೆಚ್ಚಿನವರು ಜಾರ್ಖಂಡ್‌ನ ರಾಂಚಿಯಿಂದ ಬಂದ ಭಕ್ತರು ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಕ್ಷಿಸಲ್ಪಟ್ಟವರಿಗೆ ಸೂಕ್ತ ಪರಿಹಾರವನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಲಖನೌದಲ್ಲಿ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿ: ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ದೋಣಿಗಳ ಡಿಕ್ಕಿ, ಹಲವು ಮಂದಿ ಜಲಸಮಾಧಿ ಶಂಕೆ
ನಾಪತ್ತೆಯಾದ ವ್ಯಕ್ತಿಗಳ ಶೋಧ ಕಾರ್ಯಾಚರಣೆಗೆ ವಿಪತ್ತು ನಿರ್ವಹಣಾ ತಂಡದ ಸಹಾಯ ಪಡೆಯಬೇಕು ಎಂದು ಆದಿತ್ಯನಾಥ್ ನಿರ್ದೇಶಿಸಿದ್ದಾರೆ.
14 ಮಂದಿ ನದಿಯನ್ನು ದಾಟಲು ಮಧ್ಯಾಹ್ನ ದೋಣಿಯಲ್ಲಿ ತೆರಳುತ್ತಿದ್ದರು. ಈ ವೇಳೆ ದೋಣಿ ಮಗುಚಿತು ಎಂದು ಪಾಂಡೆ ಹೇಳಿದ್ದಾರೆ.
ಸ್ಥಳೀಯರು ಅವರಲ್ಲಿ ಎಂಟು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಂದಿ ಕಾಣೆಯಾಗಿದ್ದಾರೆ ಮತ್ತು ಅವರನ್ನು ಹುಡುಕಲು ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.