ಎನ್ ಆರ್ ಐಎಫ್ ಶ್ರೇಯಾಂಕ: ಐಐಟಿ-ಮದ್ರಾಸ್ ಭಾರತದ ಅತ್ಯುತ್ತಮ ಸಂಸ್ಥೆ, ವೈದ್ಯಕೀಯ ಕಾಲೇಜುಗಳಲ್ಲಿ ಏಮ್ಸ್ ಉತ್ತಮ!

ಶಿಕ್ಷಣ ಸಚಿವಾಲಯದ ಎನ್ಐಆರ್ ಎಫ್ ಶ್ರೇಯಾಂಕದಲ್ಲಿ ಐಐಟಿ ಮದ್ರಾಸ್ ದೇಶದ ಉನ್ನತ ಶೈಕ್ಷಣಿಕ ಸಂಸ್ಥೆಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
ಐಐಟಿ ಮದ್ರಾಸ್
ಐಐಟಿ ಮದ್ರಾಸ್

ನವದೆಹಲಿ: ಶಿಕ್ಷಣ ಸಚಿವಾಲಯದ ಎನ್ಐಆರ್ ಎಫ್ ಶ್ರೇಯಾಂಕದಲ್ಲಿ ಐಐಟಿ ಮದ್ರಾಸ್ ದೇಶದ ಉನ್ನತ ಶೈಕ್ಷಣಿಕ ಸಂಸ್ಥೆಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ಸಂಶೋಧನಾ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಸ್ ಸಿ ಅಗ್ರಶ್ರೇಣಿಯಲ್ಲಿದ್ದರೆ, ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ ನ 6 ನೇ ಎಡಿಷನ್ ನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಕಟಿಸಿದ್ದು,  ದೇಶದ ಟಾಪ್ 10 ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 8 ಐಐಟಿಗಳು ಹಾಗೂ ಎರಡು ಎನ್ಐಟಿಗಳಿವೆ.

ಅಹ್ಮದಾಬಾದ್ ಐಐಎಂ ಅತ್ಯುತ್ತಮ ಬಿ-ಸ್ಕೂಲ್ ಆಗಿದ್ದು, ಜಾಮಿಯಾ ಹಮ್ದಾರ್ದ್ ಫಾರ್ಮಸಿ ಅಧ್ಯಯನಕ್ಕೆ ಅತ್ಯುತ್ತಮ ಸಂಸ್ಥೆಯಾಗಿದೆ.

ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಾಂಡ ಹೌಸ್ ಪ್ರಥಮ ಶ್ರೇಣಿಯನ್ನು ಪಡೆದಿದ್ದರೆ, ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ದೆಹಲಿ ಹಾಗೂ ಲೊಯೋಲಾ ಕಾಲೇಜು, ಚೆನ್ನೈ ನಂತರದ ಸ್ಥಾನಗಳಲ್ಲಿ ಇದೆ. 

ಎನ್ಐಆರ್ ಎಫ್ ನ ಶ್ರೇಯಾಂಕದಲ್ಲಿ ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ಏಮ್ಸ್ ದೆಹಲಿ ಇದ್ದರೆ, ಪಿಜಿಐಎಂಇಆರ್ ಚಂಡಿಗಢ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಂತರದ ಸ್ಥಾನಗಳಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com