ರೂಪಾನಿ ಓರ್ವ 'ಬಲಿಪಶು'; ಗುಜರಾತ್ ಬಿಜೆಪಿಯಲ್ಲಿನ ಒಳ ಜಗಳದಿಂದಾಗಿ ರಾಜೀನಾಮೆ: ಟಿಎಂಸಿ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ರೂಪಾನಿ ರಾಜಿನಾಮೆಗೆ ಬಿಜೆಪಿಯಲ್ಲಿನ 'ತೀವ್ರ ಅಂತಃಕಲಹ' ಕಾರಣ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ವಿಜಯ್ ರೂಪಾನಿ
ವಿಜಯ್ ರೂಪಾನಿ

ಕೋಲ್ಕತ್ತಾ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ರೂಪಾನಿ ರಾಜಿನಾಮೆಗೆ ಬಿಜೆಪಿಯಲ್ಲಿನ 'ತೀವ್ರ ಅಂತಃಕಲಹ' ಕಾರಣ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

2022ರ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭೆಯ 182 ಸ್ಥಾನಗಳಿಗೆ ಚುನಾವಣೆಗೆ ನಡೆಯಲು ಒಂದು ವರ್ಷ ಬಾಕಿ ಇರುವಾಗ ಅರವತ್ತೈದು ವರ್ಷದ ರೂಪಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಗುಜರಾತ್‌ ಬಿಜೆಪಿ ಸರ್ಕಾರದಲ್ಲಿ ದುರಾಡಳಿತವಿದೆ. ಆದರೆ ಅದು ಹಠಾತ್ ರೂಪಾನಿಯನ್ನು ಕೆಳಗಿಳಿಸುವ ವಿಷಯವಲ್ಲ. ರೂಪಾನಿಯನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಟಿಎಂಸಿ ಹೇಳಿದೆ. 

ದೇಶವನ್ನು ಆಳುವಲ್ಲಿ ಬಿಜೆಪಿಯ ಸರ್ವತೋಮುಖ ವೈಫಲ್ಯದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಹುದ್ದೆಯನ್ನು ಏಕೆ ತೊರೆಯುತ್ತಿಲ್ಲ ಎಂದು ನಾವು ಆಶ್ಚರ್ಯ ಪಡುತ್ತೇವೆ? ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಸುದ್ದಿಗಾರರಿಗೆ ತಿಳಿಸಿದರು.

ಟಿಎಂಸಿ ತನ್ನ ರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸಲು 2023 ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com