ಜೈಪುರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ 35 ಲಕ್ಷ ರೂ. ಗೆ ಮಾರಾಟ, 8 ಮಂದಿ ಬಂಧನ

ಆಘಾತಕಾರಿ ಘಟನೆಯೊಂದರಲ್ಲಿ ಜೈಪುರದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಯಾಗಿದ್ದು, ಯುವಕರು ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ನಲ್ಲಿ ಫೋಟೊ ತೆಗೆದು ಇತರ ಇಬ್ಬರಿಗೆ ಕಳುಹಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಜೈಪುರದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಯಾಗಿದ್ದು, ಯುವಕರು ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ನಲ್ಲಿ ಫೋಟೊ ತೆಗೆದು ಇತರ ಇಬ್ಬರಿಗೆ ಕಳುಹಿಸಿದ್ದಾರೆ.

ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪತ್ತೆ ಮಾಡಿದ ಜೈಪುರ ಪೊಲೀಸರು, ರಾಜಸ್ಥಾನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿರುವ ಪರೀಕ್ಷಾ ಕೇಂದ್ರದ ಯುವತಿ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.

ರಾಜಸ್ಥಾನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ(RIET) ನೀಟ್‌ ಪರೀಕ್ಷಾ ಕೇಂದ್ರವಾಗಿದ್ದು, ಸೋಮವಾರ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಪರೀಕ್ಷೆ ಇತ್ತು. ಅಪರಾಧಿಗಳನ್ನು ಪತ್ತೆ ಮಾಡಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ರಿಚಾ ತೋಮರ್ ಹೇಳಿದ್ದಾರೆ.

ತನ್ನ ಪರಿಚಯದವರು ಬಾನ್ಸೂರಿನಲ್ಲಿ ನವರತ್ನ ಅಕಾಡೆಮಿಯನ್ನು ನಡೆಸುತ್ತಿದ್ದಾರೆ ಮತ್ತು ಆತನ ಸ್ನೇಹಿತ ಅನಿಲ್ ಯಾದವ್ ಇ-ಮಿತ್ರ ನಡೆಸುತ್ತಿದ್ದಾನೆ. ಸುನಿಲ್ ಯಾದವ್ ಅವರ ಸೊಸೆ, ಧನೇಶ್ವರಿ ಅವರು ಆರ್‌ಐಇಟಿ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದರು ಎಂದು ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ಹೇಳಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು 35 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೊಬೈಲ್‌ನಿಂದ ಫೋಟೋ ತೆಗೆಯುವ ಮೂಲಕ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಲಾಗಿದೆ. ಧನೇಶ್ವರಿ ಚಿಕ್ಕಪ್ಪ ಕಾರಿನಲ್ಲಿ 10 ಲಕ್ಷ ರೂ. ಹೊತ್ತು ಕುಳಿತಿದ್ದರು - ನಂತರ ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.

ಪಂಕಜ್ ಯಾದವ್ ಮತ್ತು ಸಂದೀಪ್ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ, ಉತ್ತರ ಪತ್ರಿಕೆಯನ್ನು ರಾಮ್ ಸಿಂಗ್ ಮತ್ತು ಕಾಲೇಜಿನ ಆಡಳಿತಾಧಿಕಾರಿ ಮುಖೇಶ್ ಸಮೋಟಾ ಅವರಿಗೆ ಕಳುಹಿಸಿದ್ದಾರೆ.  ಅವರು ಅದನ್ನು ಧನೇಶ್ವರಿಗೆ ನೀಡಿದ್ದಾರೆ. ಧನೇಶ್ವರಿಯಿಂದ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡರು. ಹಾರ್ಡ್ ಕಾಪಿಯನ್ನು ನಂತರ ರಾಮ್ ಸಿಂಗ್ ಅವರಿಂದ ಹಿಂಪಡೆಯಲಾಯಿತು ಎಂದು ತೋಮರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com