ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ: ತೆಲಂಗಾಣ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Published: 16th September 2021 11:53 AM | Last Updated: 16th September 2021 01:15 PM | A+A A-

ಶಶಿ ತರೂರ್
ಹೈದರಾಬಾದ್: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂಸದ ಶಶಿ ತರೂರ್ ಹೈದರಾಬಾದ್ ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಐಟಿ ಸಚಿವ ಕೆಟಿ ರಾಮರಾವ್ ಅವರನ್ನು ಹೊಗಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, ತರೂರ್ ಮತ್ತು ರಾಮ್ ರಾವ್ ಇಬ್ಬರು ಒಂದೇ ರೀತಿಯ ವ್ಯಕ್ತಿಗಳು, ಇಬ್ಬರಿಗೂ ಇಂಗ್ಲೀಷ್ ಮಾತನಾಡಲು ಚೆನ್ನಾಗಿ ಬರುತ್ತದೆ. ಹಾಗೆಂದ ಮಾತ್ರಕ್ಕೆ ಅವರು ಜ್ಞಾನವುಳ್ಳ ವ್ಯಕ್ತಿಗಳು ಎಂದು ಅರ್ಥವಲ್ಲ ಎಂದು ಟೀಕಿಸಿದ್ದಾರೆ.
ಶಶಿ ತರೂರ್ ಅವರು ಕತ್ತೆ, ಅವರನ್ನು ಪಕ್ಷದಿಂದ ಹೊರ ಹಾಕಲಾಗುತ್ತದೆ ಎಂದು ಭಾವಿಸಿದ್ದೆ. ಸೈದಾಬಾದ್ ಅತ್ಯಾಚಾರ ಪ್ರಕರಣ ಸಂಬಂಧ ರಾಮ್ ರಾವ್ ಟ್ವೀಟ್ ಬಗ್ಗೆ ಮಾತನಾಡಿದ ರೇವಂತ್ ರೆಡ್ಡಿ, ಕೆಟಿ ರಾಮ ರಾವ್ ಅವರನ್ನು ಹೊಗಳುವ ಮುನ್ನ ಶಶಿ ತರೂರ್ ರಾಜ್ಯಗಳ ವ್ಯವಹಾರದ ಸ್ಥಿತಿಯನ್ನು ತಿಳಿದಿರಬೇಕಿತ್ತು.
ಟ್ವೀಟ್ ನಲ್ಲಿ ಆ ಕತ್ತೆಯನ್ನು ಟ್ಯಾಗ್ ಮಾಡಬೇಕಿತ್ತು, ಪರಸ್ಪರ ಇಂಗ್ಲೀಷಿನಲ್ಲಿ ಮಾತನಾಡಿದ ಮಾತ್ರಕ್ಕೆ ಇಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.