ತಂದೆ-ತಾಯಿಗೆ ಕಿರುಕುಳ: ಹೆತ್ತವರ ಫ್ಲಾಟ್ ಖಾಲಿ ಮಾಡುವಂತೆ ಪುತ್ರ, ಸೊಸೆಗೆ ಬಾಂಬೆ ಹೈಕೋರ್ಟ್ ಆದೇಶ
ತನ್ನ ವೃದ್ಧ ಹೆತ್ತವರ ಫ್ಲಾಟ್ ಅನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ನಿವಾಸಿ ಮತ್ತು ಆತನ ಪತ್ನಿಗೆ ಆದೇಶಿಸಿದೆ.
Published: 17th September 2021 03:31 PM | Last Updated: 17th September 2021 03:31 PM | A+A A-

ಬಾಂಬೆ ಹೈಕೋರ್ಟ್
ಮುಂಬೈ: ತನ್ನ ವೃದ್ಧ ಹೆತ್ತವರ ಫ್ಲಾಟ್ ಅನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ನಿವಾಸಿ ಮತ್ತು ಆತನ ಪತ್ನಿಗೆ ಆದೇಶಿಸಿದೆ.
ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ನೇತೃತ್ವದ ಏಕ ಸದಸ್ಯ ಪೀಠ, ಈ ವಾರದ ಆರಂಭದಲ್ಲಿ ಈ ಆದೇಶ ಹೊರಡಿಸಿದೆ. ಆಶಿಶ್ ದಲಾಲ್ ಮತ್ತು ಆತನ ಪತ್ನಿಗೆ ತನ್ನ 90 ವರ್ಷದ ತಂದೆ ಮತ್ತು 89 ವರ್ಷದ ತಾಯಿಯ ಒಡೆತನದ ಫ್ಲಾಟ್ ತೊರೆಯುವಂತೆ ಸೂಚಿಸಿದೆ.
ವೃದ್ಧ ದಂಪತಿಗಳು ತಮ್ಮ ಏಕೈಕ ಮಗ ಮತ್ತು ಆತನ ಹೆಂಡತಿಯ ಕೈಯಲ್ಲಿ "ನರಳುತ್ತಿದ್ದಾರೆ". ಹೀಗಾಗಿ ಫ್ಲಾಟ್ ಅನ್ನು ಖಾಲಿ ಮಾಡುವಂತೆ ದಲಾಲ್‌ಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಪೋಷಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ತಮ್ಮ ಸ್ವಂತ ಪುತ್ರರ ಕಿರುಕುಳದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಾಲಯಗಳ ಮೊರೆ ಹೋಗಬೇಕು ಎಂದು ಸಲಹೆ ನೀಡಿದೆ.
"ಇದು ವೃದ್ಧ ಹೆತ್ತವರ ತಮ್ಮ ಒಬ್ಬನೇ ಮಗ ಮತ್ತು ಸೊಸೆ ಕೈಯಲ್ಲಿ ನರಳುತ್ತಿರುವ ಪ್ರಕರಣ ಎಂದು ಗಮನಿಸಿದ ಕೋರ್ಟ್, 'ಹೆಣ್ಣು ಮಕ್ಕಳು ಎಂದಿಗೂ ಮಕ್ಕಳು' ಗಂಡು ಮಕ್ಕಳು ಮದುವೆಯಾಗುವವರೆಗೆ ಮಕ್ಕಳು ಎಂಬ ಜನಪ್ರಿಯ ಗಾದೆಮಾತಿನಲ್ಲಿ ಸತ್ಯದ ಅಂಶವಿದೆ ಎಂದು ತರುತ್ತದೆ" ಎಂದು ಹೈಕೋರ್ಟ್ ಹೇಳಿದೆ.