ಪ್ರಧಾನಿ ಮೋದಿ ಹುಟ್ಟುಹಬ್ಬ: ಶುಭಾಶಯ ಕೋರಿ ದೇಶ ನಿಮ್ಮ ವೈಫಲ್ಯಕ್ಕೆ ಬೆಲೆ ತೆರುತ್ತಿದೆ ಎಂದು ಟೀಕಿಸಿದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ತಿಳಿಸಿರುವ ಕಾಂಗ್ರೆಸ್ ಹಲವು ರಂಗಗಳಲ್ಲಿ ಮೋದಿಯವರ ವೈಫಲ್ಯಕ್ಕೆ ದೇಶ ಬೆಲೆ ತೆರುತ್ತಿದೆ. ಹೀಗಾಗಿ ಈ ದಿನವನ್ನು ನಿರುದ್ಯೋಗ ದಿನ, ರೈತ ವಿರೋಧಿ ದಿನ ಮತ್ತು ಅಧಿಕ ಬೆಲೆ ದಿನ ಎಂದು ಆಚರಿಸುತ್ತೇವೆ ಎಂದು ಹೇಳಿದೆ.
Published: 17th September 2021 06:53 PM | Last Updated: 17th September 2021 07:23 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ತಿಳಿಸಿರುವ ಕಾಂಗ್ರೆಸ್ ಹಲವು ರಂಗಗಳಲ್ಲಿ ಮೋದಿಯವರ ವೈಫಲ್ಯಕ್ಕೆ ದೇಶ ಬೆಲೆ ತೆರುತ್ತಿದೆ. ಹೀಗಾಗಿ ಈ ದಿನವನ್ನು ನಿರುದ್ಯೋಗ ದಿನ, ರೈತ ವಿರೋಧಿ ದಿನ ಮತ್ತು ಅಧಿಕ ಬೆಲೆ ದಿನ ಎಂದು ಆಚರಿಸುತ್ತೇವೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮೋದಿಯವರೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಶುಭಾಶಯ ಹೇಳಿದ್ದಾರೆ. ಭಾರತೀಯ ಯುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಚರಿಸುತ್ತಿದೆ.
ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನೇಟ್, ಮಾಜಿ ಪ್ರಧಾನಿಗಳ ಜನ್ಮದಿನವನ್ನು ವಿವಿಧ ದಿನಗಳಾಗಿ ಆಚರಿಸಲಾಗುತ್ತದೆ, ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು "ಮಕ್ಕಳ ದಿನ", ಇಂದಿರಾ ಗಾಂಧಿಯವರ ಹುಟ್ಟುಹಬ್ಬ "ರಾಷ್ಟ್ರೀಯ ಏಕೀಕರಣ ದಿನ", ರಾಜೀವ್ ಗಾಂಧಿಯವರ "ಸದ್ಭಾವನಾ ದಿನ" ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ "ಉತ್ತಮ ಆಡಳಿತ" ದಿನ ಎಂದು ಆದರೆ ಮೋದಿಯವರ ಜನ್ಮದಿನವನ್ನು "ನಿರುದ್ಯೋಗ ದಿನ" ಎಂದು ಆಚರಿಸಲಾಗುತ್ತಿದೆ.
ಪ್ರಧಾನಮಂತ್ರಿಯವರು ದೇಶವನ್ನು ಹೇಗೆ ಮುನ್ನಡೆಸಬೇಕೆಂದು ಅರಿತುಕೊಳ್ಳುವ ಬುದ್ಧಿವಂತಿಕೆಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಇಂದು ಪ್ರಧಾನಿಯವರ ಜನ್ಮದಿನವಾಗಿದ್ದು, ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇವೆ. ಅವರ ಯೋಗಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಆದರೆ ಈ ದಿನವನ್ನು ದೇಶದ ಅನೇಕ ಭಾಗಗಳಲ್ಲಿ ನಿರುದ್ಯೋಗ ದಿನ, ರೈತ ವಿರೋಧಿ ದಿನ, ಅಧಿಕ ಬೆಲೆ ದಿನ, ದುರ್ಬಲಗೊಂಡ ಆರ್ಥಿಕ ದಿನ, ನಿಮ್ಮ ಆಪ್ತ ಬಂಡವಾಳಶಾಹಿ ಸ್ನೇಹಿತರ ದಿನವಾಗಿ ಆಚರಿಸಲಾಗುತ್ತದೆ ಎಂದು ನಾವು ಹೇಳುತ್ತೇವೆ. ಇಡಿ, ಐಟಿ, ಸಿಬಿಐ ದಾಳಿ ದಿನ ಮತ್ತು ಕರೋನಾ ದುರಾಡಳಿತ ದಿನವೆಂದೂ ಜನ ನೆನಪಿಸಿಕೊಳ್ಳುತ್ತಾರೆ"ಎಂದು ಶ್ರೀನೇಟ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದ್ದಾರೆ.
"ಕಳೆದ ಏಳು ವರ್ಷಗಳಲ್ಲಿ ನೀವು ಹಲವಾರು ರಂಗಗಳಲ್ಲಿ ವಿಫಲರಾಗಿದ್ದೀರಿ. ನೀವು ದೇಶವನ್ನು ಮುನ್ನಡೆಸಿದ್ದೀರಿ ಎಂಬುದನ್ನು ಅರಿತುಕೊಳ್ಳುವ ಬುದ್ಧಿವಂತಿಕೆಯನ್ನು ದೇವರು ನಿಮಗೆ ನೀಡಲಿ ಎಂದು ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಆಡಳಿತದಲ್ಲಿ ವಿಫಲರಾಗಿರುವ ನಿಮ್ಮಿಂದ ಭಾರತವು ಅದಕ್ಕೆ ಭಾರೀ ಬೆಲೆ ತೆರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.