ನೀಟ್ ಕೋಚಿಂಗ್ ಸೆಂಟರ್ ನಡೆಸಿದ್ದ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ವಿಫಲ; ವಿದ್ಯಾರ್ಥಿ ಆತ್ಮಹತ್ಯೆ
ಖಾಸಗಿ ನೀಟ್, ಜೆಇಇ ಕೋಚಿಂಗ್ ಸೆಂಟರ್ ನಡೆಸುವ ಸ್ಕಾಲರ್ ಶಿಪ್ ಪರೀಕ್ಷೆ ಬರೆದಿದ್ದ ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಗನೊಬ್ಬ ಉತ್ತಮ ಅಂಕ ಗಳಿಸುವಲ್ಲಿ ವಿಫಲನಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Published: 18th September 2021 03:46 PM | Last Updated: 18th September 2021 04:51 PM | A+A A-

ಸಾಂದರ್ಭಿಕ ಚಿತ್ರ
ಕೊಯಮತ್ತೂರು: ಖಾಸಗಿ ನೀಟ್, ಜೆಇಇ ಕೋಚಿಂಗ್ ಸೆಂಟರ್ ನಡೆಸುವ ಸ್ಕಾಲರ್ ಶಿಪ್ ಪರೀಕ್ಷೆ ಬರೆದಿದ್ದ ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಗನೊಬ್ಬ ಉತ್ತಮ ಅಂಕ ಗಳಿಸುವಲ್ಲಿ ವಿಫಲನಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೀಟ್ ಮತ್ತು ಜೆಇಇ ಯಂತಹ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಗೆ ಕೋಚಿಂಗ್ ನಡೆಸುತ್ತಿದ್ದ ಖಾಸಗಿ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಸೀಟ್ ಪಡೆಯುವ ಸ್ಕಾಲರ್ ಶಿಪ್ ಪರೀಕ್ಷೆಗಾಗಿ ಆತ ಹಾಜರಾಗಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮೃತನನ್ನು ಎಂ ಧರುಣಶಂಕರ್ ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಂ ಮುರುಗನ್ ಅವರ ಪುತ್ರನಾಗಿದ್ದು, ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಕ್ವಾರ್ಟಸ್ ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಕೋಚಿಂಗ್ ತರಗತಿಗೆ ಸೀಟ್ ಪಡೆಯಲು ಇತ್ತೀಚಿಗೆ ಖಾಸಗಿ ಸಂಸ್ಥೆ ನಡೆಸಿದ್ದ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಧರುಣ ಶಂಕರ್ ಹಾಜರಾಗಿದ್ದ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಲ್ಲಿ ವಿಫಲತೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ, ಪೋಷಕರು ಕೂಡಾ ಆತ ಗಳಿಸಿರುವ ಅಂಕಗಳ ಬಗ್ಗೆ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ಶುಕ್ರವಾರ ರಾತ್ರಿ ಮನೆಯಲ್ಲಿ ಒಬ್ಬನೇ ಇರುವಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂದಿನ ತನಿಖೆ ಪ್ರಗತಿಯಲ್ಲಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಎಂಸಿಹೆಚ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸಾಯಿಬಾಬಾ ಕಾಲೋನಿ ಪೊಲೀಸರು ಹೇಳಿದ್ದಾರೆ.