ಕಾಂಗ್ರೆಸ್ ಗೆ ಶೀಘ್ರ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್
'ಈಗ ಮಧ್ಯಂತರ ಹಂತದಲ್ಲಿರುವ' ಪಕ್ಷವನ್ನು ಮುನ್ನಡೆಸಲು ಶೀಘ್ರ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ಶಶಿ ತರೂರ್ ಅವರು ಶನಿವಾರ ಹೇಳಿದ್ದಾರೆ.
Published: 18th September 2021 07:26 PM | Last Updated: 18th September 2021 07:26 PM | A+A A-

ಶಶಿ ತರೂರ್
ಕೊಚ್ಚಿ: 'ಈಗ ಮಧ್ಯಂತರ ಹಂತದಲ್ಲಿರುವ' ಪಕ್ಷವನ್ನು ಮುನ್ನಡೆಸಲು ಶೀಘ್ರ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ಶಶಿ ತರೂರ್ ಅವರು ಶನಿವಾರ ಹೇಳಿದ್ದಾರೆ.
ಪಕ್ಷಕ್ಕೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಎಲ್ಲಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಶಶಿ ತರೂರ್ ತಿಳಿಸಿದ್ದಾರೆ.
"ನಾವೆಲ್ಲರೂ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಇಷ್ಟಪಟ್ಟೆವು. ಆದರೆ ನಾವು ಈಗ ಮಧ್ಯಂತರ ಹಂತದಲ್ಲಿದ್ದೇವೆ. ಕಳೆದ ಎರಡು ವರ್ಷಗಳಿಂದ ನಾವು ಖಾಯಂ ಅಧ್ಯಕ್ಷರನ್ನು ಹೊಂದಿಲ್ಲ. ಅದನ್ನು ಸರಿಪಡಿಸಬೇಕು. ಕಾಂಗ್ರೆಸ್ ಸಂಘಟನೆಯಲ್ಲಿ ನಾವು ಶಕ್ತಿಯನ್ನು ತುಂಬಬೇಕು. ನಾವೆಲ್ಲರೂ ಪಕ್ಷಕ್ಕೆ ಖಾಯಂ ಅಧ್ಯಕ್ಷರನ್ನು ಬಯಸಿದ್ದೇವೆ, "ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಸಂಸದ್ ಟಿವಿಗಾಗಿ ಸಂದರ್ಶಕರಾಗಿ ಬದಲಾದ ಶಶಿ ತರೂರ್, ಪ್ರಿಯಾಂಕಾ ಚತುರ್ವೇದಿ!
ಮೂವಾಟ್ಟುಪುಳಾ ಶಾಸಕ ಮ್ಯಾಥ್ಯೂ ಕುಜಲ್ನಾಡನ್ ಅವರ ಕಚೇರಿ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಸೋನಿಯಾ ಗಾಂಧಿ ಅವರು ಹಲವು ವರ್ಷಗಳಿಂದ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಳ್ಳಲು ಬಯಸಿದರೆ, ಅದು ಶೀಘ್ರವಾಗಿ ಆಗಬೇಕು. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬೇಕಾದರೆ ಈ ಕೆಲಸಗಳು ಬೇಗನೆ ಆಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.