ಸಿಧು 'ಡ್ರಾಮಾ ಮಾಸ್ಟರ್', ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ತಲುಪಲು ಹೆಣಗಾಡಲಿದೆ: ಪಂಜಾಬ್ ಮಾಜಿ ಸಿಎಂ ಅಮರೀಂದರ್

ಪಂಜಾಬ್ ಪ್ರದೇಶ ಕಾಂಗ್ರೆಸ್(ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಧು ಅವರನ್ನು "ಸೂಪರ್ ಸಿಎಂ" ಎಂದು ಕರೆದಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಸಿಧು ಒಬ್ಬ 'ಡ್ರಾಮಾ ಮಾಸ್ಟರ್'.
ಕ್ಯಾಪ್ಟನ್ ಅಮರೀಂದರ್ ಸಿಂಗ್
ಕ್ಯಾಪ್ಟನ್ ಅಮರೀಂದರ್ ಸಿಂಗ್

ಚಂಡೀಗಢ: ಪಂಜಾಬ್ ಪ್ರದೇಶ ಕಾಂಗ್ರೆಸ್(ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಧು ಅವರನ್ನು "ಸೂಪರ್ ಸಿಎಂ" ಎಂದು ಕರೆದಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಸಿಧು ಒಬ್ಬ 'ಡ್ರಾಮಾ ಮಾಸ್ಟರ್'. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ತಲುಪಲು ಹೆಣಗಾಡಲಿದೆ ಎಂದು ಬುಧವಾರ ಹೇಳಿದ್ದಾರೆ.

'ಇಂತಹ ಅಪಾಯಕಾರಿ ವ್ಯಕ್ತಿ (ಸಿಧು) ಯಿಂದ ದೇಶವನ್ನು ರಕ್ಷಿಸಲು ತಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಸಿಧು ಅವರ ಸೋಲನ್ನು ಖಚಿತಪಡಿಸಿಕೊಳ್ಳಲು ಪಿಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮಾಜಿ ಸಿಎಂ ಘೋಷಿಸಿದ್ದಾರೆ.

"ಅವರು (ಸಿದ್ದು) ರಾಜ್ಯಕ್ಕೆ ಅಪಾಯಕಾರಿ" ಎಂದಿರುವ ಅಮರೀಂದರ್ ಸಿಂಗ್, ತಮ್ಮದೇ ಸಚಿವಾಲಯವನ್ನು ನಿಭಾಯಿಸಲು ಸಾಧ್ಯವಾಗದ ಸಿಧು ಈಗ ಕ್ಯಾಬಿನೆಟ್ ಅನ್ನು ನಿರ್ವಹಿಸುತ್ತಿದ್ದಾರೆ. "ಸಿಧು ಸೂಪರ್ ಸಿಎಂ ಆಗಿ ವರ್ತಿಸಿದರೆ, ಪಕ್ಷ ಯಾವುದೇ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಈ "ಡ್ರಾಮಾ ಮಾಸ್ಟರ್ ನಾಯಕತ್ವದಲ್ಲಿ", ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಅಂಕಿಗಳನ್ನು ತಲುಪಲು ಹೆಣಗಾಡಲಿದೆ ಎಂದು ಅಮರೀಂದರ್ ಸಿಂಗ್ ಅವರು ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com