ಮಧ್ಯ ಪ್ರದೇಶ: 90 ವರ್ಷದ ಅಜ್ಜಿ ಡ್ರೈವಿಂಗ್ ಕಲಿಯುವ ಪ್ರಯತ್ನ ಶ್ಲಾಘಿಸಿದ ಸಿಎಂ

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಕಾರು ಚಲಾಯಿಸುತ್ತಿರುವ ವಿಡಿಯೋ ಗುರುವಾರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಕಾರು ಚಾಲನೆ ಮಾಡುತ್ತಿರುವ ಅಜ್ಜಿ
ಕಾರು ಚಾಲನೆ ಮಾಡುತ್ತಿರುವ ಅಜ್ಜಿ

ದೇವಾಸ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಕಾರು ಚಲಾಯಿಸುತ್ತಿರುವ ವಿಡಿಯೋ ಗುರುವಾರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ನನ್ನ ಮಗಳು ಮತ್ತು ಸೊಸೆಯರು ಸೇರಿದಂತೆ ಕುಟುಂಬದ ಎಲ್ಲಿರಿಗೂ ಡ್ರೈವಿಂಗ್ ಗೊತ್ತು. ಹೀಗಾಗಿ ನಾನು ಸಹ ಡ್ರೈವಿಂಗ್ ಕಲಿತೆ ಎಂದು ಜಿಲ್ಲೆಯ ಬಿಲಾವಲಿ ಪ್ರದೇಶದ ನಿವಾಸಿ ರೇಶಮ್ ಬಾಯಿ ತನ್ವಾರ್ ಅವರು ಹೇಳಿದ್ದಾರೆ.

"ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರು ಮತ್ತು ಟ್ರಾಕ್ಟರುಗಳನ್ನು ಓಡಿಸಿದ್ದೇನೆ" ಎಂದು ತನ್ವರ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವೃದ್ಧಾಪ್ಯದಲ್ಲೂ ಕಾರು ಚಾಲನೆ ಕಲಿತ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ ಮತ್ತು ಇದು ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

"ನಮ್ಮ ಆಸಕ್ತಿಯನ್ನು ಪೂರೈಸಿಕೊಳ್ಳಲು ವಯಸ್ಸಿನ ನಿರ್ಬಂಧವಿಲ್ಲ. ಈ ಅಜ್ಜಿ ನಮ್ಮೆಲ್ಲರಿಗೂ ಸ್ಫೂರ್ತಿ" ಎಂದು ಮಧ್ಯ ಪ್ರದೇಶ ಸಿಎಂ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com