
ಕಮ್ಲಾ ಭಾಸಿನ್
ನವದೆಹಲಿ: ಮಹಿಳಾ ಹಕ್ಕುಗಳ ಜನಪ್ರಿಯ ಹೋರಾಟಗಾರ್ತಿ, ಕವಿಯತ್ರಿ, ಲೇಖಕಿ ಕಮ್ಲಾ ಭಾಸಿನ್ ಶನಿವಾರ ವಿಧಿವಶರಾಗಿದ್ದಾರೆ.
75 ವರ್ಷದ ಕಮ್ಲಾ ಭಾಸಿನ್ ಶನಿವಾರ ಮುಂಜಾನೆ 3 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಹೋರಾಟಗಾರ್ತಿ ಕವಿತಾ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಹಿಳಾ ಚಳುವಳಿಯಲ್ಲಿ ಭಾಸಿನ್ ಪ್ರಮುಖವಾಗಿ ಭಾಗವಹಿಸಿದ್ದರು. ಇದು ಭಾರತ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಮಹಿಳಾ ಚಳುವಳಿಗೆ ದೊಡ್ಡ ಹಿನ್ನಡೆಯಾಗಿದೆ. ಏನೇ ಸಂಕಷ್ಟ ಬಂದರೂ ಆಕೆ ತಮ್ಮ ಜೀವನವನ್ನು ಅನುಭವಿಸಿದರು. ಕಮಲಾ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಿಸುತ್ತೀರಿ. ತೀವ್ರ ದುಃಖದಲ್ಲಿರುವ ಸಹೋದರಿಯರಲ್ಲಿ ಕವಿತಾ ಶ್ರೀವಾಸ್ತವ ಎಂದು ಟ್ವೀಟ್ ಮಾಡಿದ್ದಾರೆ.