ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಗೆ ವಿಎಂ ಸುಧೀರನ್ ರಾಜೀನಾಮೆ

ಹಿರಿಯ ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್ ಅವರು 21 ಸದಸ್ಯರ ಕೆಪಿಸಿಸಿಯ ಉನ್ನತ ಅಧಿಕಾರ ಸಮತಿಯಾದ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ಶನಿವಾರ ರಾಜೀನಾಮೆ ನೀಡಿದ್ದಾರೆ.
ವಿಎಂ ಸುಧೀರನ್
ವಿಎಂ ಸುಧೀರನ್

ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್ ಅವರು 21 ಸದಸ್ಯರ ಕೆಪಿಸಿಸಿಯ ಉನ್ನತ ಅಧಿಕಾರ ಸಮತಿಯಾದ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಪಿಎಸಿ ಒಂದು ಗುಮ್ಮ ಆಗಿ ಬದಲಾಗಿದೆ ಎಂದು ಸುಧೀರನ್ ಅವರು ದೂರಿದ್ದಾರೆ. ಸಾಂಸ್ಥಿಕ ನವೀಕರಣದ ಬಗ್ಗೆ ತಮ್ಮೊಂದಿಗೆ ಮಾತುಕತೆ ನಡೆಸದ ಕಾರಣಕ್ಕಾಗಿ ಸುಧೀರನ್ ಅವರು ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸುಧೀರನ್ ಅವರು ರಾಜೀನಾಮೆ ನೀಡಲು ನಿರ್ಧರಿಸಿರುವುದು ದುರದೃಷ್ಟಕರ ಮತ್ತು ಅವರೊಂದಿಗೆ ಮಾತುಕತೆ ನಡೆಸುವುದಾಗಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಅವರು ಹೇಳಿದ್ದಾರೆ.

ಸುಧೀರನ್ ಅವರು ಇಂದು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಅವರಿಗೆ ನೀಡಿದ್ದಾರೆ. ಮಾಜಿ ಕೆಪಿಸಿಸಿ ಅಧ್ಯಕ್ಷ ಸುಧೀರನ್ ಅವರು ತಮ್ಮ ನಿಷ್ಠಾವಂತರಲ್ಲಿ ಒಬ್ಬರನ್ನು ಕೊಲ್ಲಂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ಉತ್ಸುಕರಾಗಿದ್ದರು ಎಂದು ನಂಬಲಾಗಿದೆ. ಆದರೆ ಈ ಪ್ರಸ್ತಾಪವನ್ನು ಸುಧಾಕರನ್ ಪರಿಗಣಿಸಲಿಲ್ಲ. ಇದು ಸುಧೀರನ್‌ ಅಸಮಾಧಾನತ್ತೆ ಕಾರಣವಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com