ನ್ಯಾಯಾಂಗ ನಿಂದನೆಗೆ ತಲೆಕೆಡಿಸಿಕೊಳ್ಳಬೇಡಿ, ಕೋರ್ಟ್ ನಿಂದ ಸರ್ಕಾರ ನಡೆಯುವುದಿಲ್ಲ: ಸಿಎಂ ಬಿಪ್ಲಬ್ ಕುಮಾರ್ ದೇಬ್
ನ್ಯಾಯಾಂಗ ನಿಂದನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಕೋರ್ಟ್ ನಿಂದ ಸರ್ಕಾರ ನಡೆಯುತ್ತಿಲ್ಲ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published: 27th September 2021 12:17 PM | Last Updated: 27th September 2021 01:03 PM | A+A A-

ಬಿಪ್ಲಬ್ ಕುಮಾರ್ ದೇಬ್
ತ್ರಿಪುರ: ನ್ಯಾಯಾಂಗ ನಿಂದನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಕೋರ್ಟ್ ನಿಂದ ಸರ್ಕಾರ ನಡೆಯುತ್ತಿಲ್ಲ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತ್ರಿಪುರದ ನಾಗರಿಕ ಸೇವಾ ಅಧಿಕಾರಿಗಳೊಂದಿಗೆ ಮಾತನಾಡುವಾಗ, ನ್ಯಾಯಾಲಯಕ್ಕೆ ಹೆದರಬೇಡಿ ಎಂದು ಹೇಳುವುದು ದಾಖಲಾಗಿದೆ. 'ರಾಜ್ಯದ ಜನರ ಒಳಿತಿಗಾಗಿ ಸದ್ಭಾವನೆಯಿಂದ ನೀವೆಲ್ಲಾ ಕೆಲಸ ಮಾಡಬೇಕು. ಈ ಹಿಂದಿನ ಸರ್ಕಾರದಂತೆ ನೀವು ಕೆಲಸ ಮಾಡಬಾರದು. ನ್ಯಾಯಾಂಗ ನಿಂದನೆಯಾದ್ರೂ ಪರವಾಗಿಲ್ಲ' ಕೆಲಸ ಮಾಡಿಎಂದು ಹೇಳಿದ್ದಾರೆ.
ನ್ಯಾಯಾಂಗ ನಿಂದನೆಯ ಕಾರಣದಿಂದಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹಲವು ಅಧಿಕಾರಿಗಳು ನನ್ನ ಜತೆ ಸಬೂಬು ಹೇಳುತ್ತಾರೆ. ಅದಕ್ಕೆಲ್ಲಾ ಯಾಕೆ ಹೆದರಬೇಕು? ನ್ಯಾಯಾಲಯ ಅದರ ತೀರ್ಪು ನೀಡುತ್ತದೆ. ಪೊಲೀಸರು ಅದನ್ನು ಪಾಲನೆ ಮಾಡುತ್ತಾರೆ. ಆ ಪೊಲೀಸರು ನನ್ನ ಕೆಳಗೆ ಇದ್ದಾರೆ. ಇದರ ಬಗ್ಗೆ ವ್ಯವಹರಿಸಲು ಅವರಿಗೆ ಬೇಕಾದಷ್ಟು
ವಿಧಾನಗಳಿವೆ ಎಂದು ಬಿಪ್ಲಬ್ ಹೇಳಿದ್ದಾರೆ.
ಅಲ್ಲದೇ ಅಧಿಕಾರಿಗಳಿಗೆ ಉಪದೇಶ ನೀಡಿರುವ ಅವರು, 'ನ್ಯಾಯಾಲಯವನ್ನು ಹುಲಿಯ ಹಾಗೆ ಭಯ ಪಡಿ' ಎಂದು ಹೇಳಿದ್ದಾರೆ. ಅಲ್ಲದೇ 'ಇಲ್ಲಿ ನಾನೇ ಹುಲಿ. ಜನ ಆಯ್ಕೆ ಮಾಡಿದ ಸರ್ಕಾರದ ಮುಖ್ಯಸ್ಥನಾಗಿ ನಾನು ಇದ್ದೇನೆ. ಜನ ಹೇಳುತ್ತಾರೆ, ಸರ್ಕಾರ ಎಂದರೆ ಜನರಿಂದ ಆಯ್ಕೆಯಾಗಿದ್ದು. ನ್ಯಾಯಾಲಯದಿಂದಲ್ಲ. ನ್ಯಾಯಾಲಯ ಇರುವುದು ಜನರಿಗಾಗಿ. ಜನರೇ ನ್ಯಾಯಾಲಯ ಅಲ್ಲ' ಎಂದು ಹೇಳಿದ್ದಾರೆ.