ಭವಾನಿಪುರ ಉಪ ಚುನಾವಣೆ: ಮತದಾನದ ದಿನ ಸೆಕ್ಷನ್ 144, ಕೇಂದ್ರಿಯ ಪಡೆ ನಿಯೋಜನೆಗೆ ಬಿಜೆಪಿ ಒತ್ತಾಯ
ಉಪ ಚುನಾವಣೆ ನಡೆಯಲಿರುವ ಸೆಪ್ಟೆಂಬರ್ 30 ರಂದು ಭವಾನಿಪುರ ಕ್ಷೇತ್ರದಲ್ಲಿ ಸೆಕ್ಷನ್ 144 ಜಾರಿಗೊಳಿಸಬೇಕು ಹಾಗೂ ಪ್ರತಿಯೊಂದು ಮತಗಟ್ಟೆಗಳಲ್ಲಿ ಕೇಂದ್ರಿಯ ಪ್ಯಾರಾಮಿಲಿಟರಿ ಪಡೆ ನಿಯೋಜಿಸಬೇಕೆಂದು ಬಿಜೆಪಿ ನಿಯೋಗವೊಂದು ಸೋಮವಾರ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ, ಮನವಿ ಸಲ್ಲಿಸಿದೆ.
Published: 28th September 2021 08:47 AM | Last Updated: 28th September 2021 01:05 PM | A+A A-

ಬಿಜೆಪಿ ಮುಖಂಡ ದಿಲೀಪ್ ಘೋಷ್ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಚಿತ್ರ
ಕೊಲ್ಕತ್ತಾ: ಬಿಜೆಪಿ ಪಕ್ಷದ ಮುಖಂಡರ ಮೇಲೆ ದಾಳಿ ಆರೋಪದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯಲಿರುವ ಸೆಪ್ಟೆಂಬರ್ 30 ರಂದು ಭವಾನಿಪುರ ಕ್ಷೇತ್ರದಲ್ಲಿ ಸೆಕ್ಷನ್ 144 ಜಾರಿಗೊಳಿಸಬೇಕು ಹಾಗೂ ಪ್ರತಿಯೊಂದು ಮತಗಟ್ಟೆಗಳಲ್ಲಿ ಕೇಂದ್ರಿಯ ಪ್ಯಾರಾಮಿಲಿಟರಿ ಪಡೆ ನಿಯೋಜಿಸಬೇಕೆಂದು ಬಿಜೆಪಿ ನಿಯೋಗವೊಂದು ಸೋಮವಾರ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ, ಮನವಿ ಸಲ್ಲಿಸಿದೆ.
ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ಖಚಿತಪಡಿಸಿಕೊಳ್ಳಲು ಮತದಾನದ ದಿನದಂದು ಕ್ಷೇತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೋಲ್ಕತ್ತಾ ಪೊಲೀಸರ ನೇರ ನಿಯಂತ್ರಣವನ್ನು ಅನುಮತಿಸಬಾರದು ಎಂದು ಬಿಜೆಪಿ ನಿಯೋಗವು ಸಿಇಒ ಆರಿಫ್ ಅಫ್ತಾಬ್ ಅವರನ್ನು ಒತ್ತಾಯಿಸಿದೆ.
ಪಕ್ಷದ ಬರಾಕ್‌ಪುರ್ ಸಂಸದ ಅರ್ಜುನ್ ಸಿಂಗ್ ಅವರು ಭವಾನಿಪುರದ ಹನುಮಾನ್ ಮಂದಿರದ ಬಳಿ ಹಗಲಿನಲ್ಲಿ ಹೇಗೆ ಅಣಕಿಸಿಲಾಯಿತು ಮತ್ತು ಪ್ರಚಾರ ಮಾಡದೆ ಹೇಗೆ ಹಿಂತಿರುಗಬೇಕಾಯಿತು ಎಂಬುದನ್ನು ಬಿಜೆಪಿ ಸಿಇಒಗೆ ತಿಳಿಸಿದೆ ಎಂದು ರಾಜ್ಯಸಭಾ ಸಂಸದ ಸ್ವಪನ್ ದಾಸ್ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.
ಎರಡನೇ ಘಟನೆಯಲ್ಲಿ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮೇಲೆ ನಡೆದ ದಾಳಿಯನ್ನು ಸಹ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಸಲಾಗಿದೆ ಎಂದು ಅವರು ಹೇಳಿದರು.