ಮೇಘಾಲಯ: ಮಧ್ಯರಾತ್ರಿ ನದಿಗೆ ಬಿದ್ದ ಬಸ್, ಆರು ಪ್ರಯಾಣಿಕರು ಸಾವು, ಗಾಯಗೊಂಡವರು ಆಸ್ಪತ್ರೆಗೆ ದಾಖಲು
ಮೇಘಾಲಯದ ಶಿಲ್ಲಾಂಗ್ನ ನೊಂಗ್ಚ್ರಮ್ ಎಂಬಲ್ಲಿ ಬಸ್ ರಿಂಗ್ಡಿ ನದಿಗೆ ಬಿದ್ದು ಆರು ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ ತುರಾದಿಂದ ಶಿಲ್ಲಾಂಗ್ಗೆ ಹೋಗುತ್ತಿತ್ತು. ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್ ಬಳಿ ರಿಂಗ್ಡಿ ನದಿಗೆ ಬಿದ್ದಿದೆ.
Published: 30th September 2021 11:00 AM | Last Updated: 30th September 2021 11:37 AM | A+A A-

ನದಿಗೆ ಬಿದ್ದ ಬಸ್ಸು
ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್ನ ನೊಂಗ್ಚ್ರಮ್ ಎಂಬಲ್ಲಿ ಬಸ್ ರಿಂಗ್ಡಿ ನದಿಗೆ ಬಿದ್ದು ಆರು ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ ತುರಾದಿಂದ ಶಿಲ್ಲಾಂಗ್ಗೆ ಹೋಗುತ್ತಿತ್ತು. ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್ಚ್ರಮ್ ಬಳಿ ರಿಂಗ್ಡಿ ನದಿಗೆ ಬಿದ್ದಿದೆ.
ನಾಲ್ವರು ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನು ಇಬ್ಬರ ಮೃತದೇಹ ಬಸ್ಸಿನೊಳಗೆ ಸಿಕ್ಕಿಹಾಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಗೆ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದುವರೆಗೆ 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬಸ್ನಲ್ಲಿ ಚಾಲಕ ಸೇರಿ ಒಟ್ಟು 22 ಮಂದಿ ಇದ್ದರು. ಬಸ್ ಚಾಲಕ ಮೃತಪಟ್ಟಿದ್ದಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೇಗವಾಗಿ ಸಾಗುತ್ತಿದ್ದ ಬಸ್ಸಿನ ಮುಂದಿನ ಭಾಗ ಸೇತುವೆ ಪೋಸ್ಟ್ ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.