ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಉತ್ತರ ಪ್ರದೇಶ ಕ್ಯಾಬಿನೆಟ್ ಸಚಿವರಿಗೆ ಒಂದು ವರ್ಷ ಜೈಲು ಶಿಕ್ಷೆ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಯೋಗಿ ಆದಿತ್ಯನಾಥ್ ಸರ್ಕಾರದ ಕ್ಯಾಬಿನೆಟ್ ಸಚಿವ ರಾಕೇಶ್ ಸಚನ್ ಅವರಿಗೆ ನ್ಯಾಯಾಲಯ ಶಸ್ತ್ರಾಸ್ತ್ರ ಕಾಯ್ದೆಯಡಿ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ ಮತ್ತು 1500 ರೂಪಾಯಿ ದಂಡ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಯೋಗಿ ಆದಿತ್ಯನಾಥ್ ಸರ್ಕಾರದ ಕ್ಯಾಬಿನೆಟ್ ಸಚಿವ ರಾಕೇಶ್ ಸಚನ್ ಅವರಿಗೆ ನ್ಯಾಯಾಲಯ ಶಸ್ತ್ರಾಸ್ತ್ರ ಕಾಯ್ದೆಯಡಿ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ ಮತ್ತು 1500 ರೂಪಾಯಿ ದಂಡ ವಿಧಿಸಿದೆ.

ಆದಾಗ್ಯೂ, ಸಚಿವ ರಾಕೇಶ್ ಸಚನ್‌ಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ಕೋರ್ಟ್ ನಂತರ ಜಾಮೀನು ಸಹ ನೀಡಿದೆ.

ಸಂಪುಟ ಸಚಿವರಿಗೆ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯಾಗಿರುವುದರಿಂದ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ವಕೀಲ ಸಂಜಯ್ ಗುಪ್ತಾ ಅವರು ಹೇಳಿದ್ದಾರೆ. 50,000 ಬಾಂಡ್‌ ಮೇಲೆ ಸಚನ್‌ ಅವರಿಗೆ ಜಾಮೀನು ನೀಡಲಾಗಿದೆ.

ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವ ಆತಂಕದಲ್ಲಿದ್ದ ಸಚಿವ ಸಚನ್ ಅವರು ಈಗ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಮೂಲಕ ನಿರಾಳರಾಗಿದ್ದಾರೆ. ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆ ವಿಧಿಸಿದ್ದರೆ ಅವರು ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಳ್ಳುತ್ತಿದ್ದರು.

ಸಚನ್ ಅವರು ತಮ್ಮ ಬಳಿಯಿದ್ದ ರೈಫಲ್‌ನ ಪರವಾನಗಿಯನ್ನು ಜಿಲ್ಲಾ ಪೊಲೀಸರಿಗೆ ಹಾಜರುಪಡಿಸಲು ವಿಫಲವಾದ ನಂತರ ಅವರು ವಿರುದ್ಧ 1991ರ ಆಗಸ್ಟ್ 13ರಂದು ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಾಸಿಕ್ಯೂಷನ್ ಪ್ರಕಾರ ರೈಫಲ್ ತಮ್ಮ ತಾತನದ್ದು ಎಂದು ಸಚನ್ ಆಗ ಹೇಳಿಕೊಂಡಿದ್ದರು. ಆಗಸ್ಟ್ 6 ರಂದು ಈ ಪ್ರಕರಣದಲ್ಲಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com