ನಿತೀಶ್ ಜೊತೆ ಮಾತುಕತೆ ನಂತರವೂ ಮಿತ್ರಪಕ್ಷದ ಮನವೊಲಿಕೆಯಲ್ಲಿ ಅಮಿತ್ ಶಾ ವಿಫಲ!

ಬಿಹಾರದಲ್ಲಿ ಬಿಜೆಪಿ-ಜೆಡಿಯು ನಡುವಿನ ಮೈತ್ರಿ ಮುರಿದುಬಿದ್ದಿದ್ದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಬಿಜೆಪಿಗೆ ತೀವ್ರ ಹಿನ್ನೆಡೆಯುಂಟಾಗಿದೆ.
ಅಮಿತ್ ಶಾ
ಅಮಿತ್ ಶಾ

ಪಾಟ್ನ: ಬಿಹಾರದಲ್ಲಿ ಬಿಜೆಪಿ-ಜೆಡಿಯು ನಡುವಿನ ಮೈತ್ರಿ ಮುರಿದುಬಿದ್ದಿದ್ದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಬಿಜೆಪಿಗೆ ತೀವ್ರ ಹಿನ್ನೆಡೆಯುಂಟಾಗಿದೆ.
 
ಮೂಲಗಳ ಪ್ರಕಾರ ಸೋಮವಾರ ರಾತ್ರಿ ಖುದ್ದು ಅಮಿತ್ ಶಾ ನಿತೀಶ್ ಕುಮಾರ್ ಗೆ ಕರೆ ಮಾಡಿ 6 ನಿಮಿಷಗಳ ಕಾಲ ಮಾತನಾಡಿದ್ದರು. 

ನಿತೀಶ್ ಕುಮಾರ್ ಅವರನ್ನು ಎನ್ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವಂತೆ ಮನವಿ ಮಾಡಿದ್ದರು ಅಷ್ಟೇ ಅಲ್ಲದೇ 2025 ವರೆಗೂ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೀರಿ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ಇದ್ಯಾವುದಕ್ಕೂ ನಿತೀಶ್ ಕುಮಾರ್ ಮನವೊಲಿಕೆಯಾಗಲಿಲ್ಲ. ರೀಡಿಫ್.ಕಾಮ್ ನ ವರದಿಯ ಪ್ರಕಾರ, ಈಗ ಬಿಜೆಪಿಯಿಂದ ಹೊರಬಂದಿರುವ ನಿತೀಶ್ ಕುಮಾರ್ ಗೆ ಆರ್ ಜೆಡಿ, ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ ಜೆಡಿ ಮೂಲಗಳ ಪ್ರಕಾರ ಮಹಾಘಟಬಂಧನ್ 2.0 ಸರ್ಕಾರ ರಚನೆಯಾಗಲಿದ್ದು, ಶೀಘ್ರವೇ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಲಿದೆ.ಜೆಡಿಯು ಸಂಸದರು, ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಯಾವುದೇ ನಿರ್ಧಾರ ಕೈಗೊಂಡರೂ ಬದ್ಧ ಎಂದು ಶಾಸಕರು, ಸಂಸದರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com