ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಉಗ್ರರಿಂದ ವಲಸೆ ಕಾರ್ಮಿಕನ ಹತ್ಯೆ

ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸೋದನಾರ ಸುಂಬಲ್ ಎಂಬ ಪ್ರದೇಶದಲ್ಲಿ ಕಳೆದ ಮಧ್ಯರಾತ್ರಿ ನಸುಕಿನ ಜಾವ ಉಗ್ರಗಾಮಿಗಳು ಬಿಹಾರ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ ತೀವ್ರ ಗಾಯಗೊಂಡ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published on

ಬಂಡಿಪೋರಾ: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸೋದನಾರ ಸುಂಬಲ್ ಎಂಬ ಪ್ರದೇಶದಲ್ಲಿ ಕಳೆದ ಮಧ್ಯರಾತ್ರಿ ನಸುಕಿನ ಜಾವ ಉಗ್ರಗಾಮಿಗಳು ಬಿಹಾರ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ ತೀವ್ರ ಗಾಯಗೊಂಡ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕಾರ್ಮಿಕನನ್ನು ಮೊಹಮ್ಮದ್ ಅಮ್ರೇಜ್ ಎಂದು ಗುರುತಿಸಲಾಗಿದ್ದು, ಇವರು ಬಿಹಾರದ ಮಾದೇಪುರದವರು. ಗುಂಡು ತಗುಲಿದ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. 

ನಿನ್ನೆ ಗುರುವಾರ ರಜೌರಿಯಲ್ಲಿ ಇಬ್ಬರು ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದರಿಂದ ಇಬ್ಬರು ಉಗ್ರರು ಹತ್ಯೆಯಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ನಿನ್ನೆ ಗುರುವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಸುಬೇದಾರ್ ರಾಜೇಂದ್ರ ಪ್ರಸಾದ್, ರೈಫಲ್‌ಮ್ಯಾನ್ ಮನೋಜ್ ಕುಮಾರ್ ಮತ್ತು ರೈಫಲ್‌ಮ್ಯಾನ್ ಲಕ್ಷ್ಮಣನ್ ಡಿ ಹುತಾತ್ಮರಾಗಿದ್ದಾರೆ. 

ಆದಾಗ್ಯೂ, ಸೇನಾ ಸಿಬ್ಬಂದಿ ಮೂಲಶಿಬಿರದಲ್ಲಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು.

X

Advertisement

X
Kannada Prabha
www.kannadaprabha.com