ಕನಿಷ್ಟ ಬೆಂಬಲ ಬೆಲೆ ಸಮಿತಿಯ ಮೊದಲ ಸಭೆಗೆ ಆ.22 ಕ್ಕೆ 

ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ಗೆ ಸಂಬಂಧಿಸಿದ ಸಮಿತಿಯ ಮೊದಲ ಸಭೆ ಆ.22 ರಂದು ನಡೆಯಲಿದೆ. 
ರೈತರು (ಸಂಗ್ರಹ ಚಿತ್ರ)
ರೈತರು (ಸಂಗ್ರಹ ಚಿತ್ರ)

ನವದೆಹಲಿ: ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ಗೆ ಸಂಬಂಧಿಸಿದ ಸಮಿತಿಯ ಮೊದಲ ಸಭೆ ಆ.22 ರಂದು ನಡೆಯಲಿದೆ. ಮುಂದಿನ ಕಾರ್ಯತಂತ್ರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣ (ಎನ್ಎಎಸ್ ಸಿ)ಯಲ್ಲಿ ಈ ಸಭೆ ಬೆಳಿಗ್ಗೆ 10:30 ಕ್ಕೆ ನಡೆಯಲಿದೆ.
 
ಮೊದಲ ಸಭೆಯಲ್ಲಿ ಉಪಸಮಿತಿ ರಚನೆಯ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸಮಿತಿಯ ಪ್ರಕ್ರಿಯೆಗಳಲ್ಲಿ ಭಾಗಿಯಾಗುವಂತೆ ಸಂಯುಕ್ತ ಕಿಸಾನ್ ಮೋರ್ಚ (ಎಸ್ ಕೆಎಂ) ಗೆ ಸರ್ಕಾರ ಮನವೊಲಿಸುತ್ತಿದ್ದು, ಸರ್ಕಾರದ ಸಲಹೆಯಂತೆ ತನ್ನ ಮೂವರು ಪ್ರತಿನಿಧಿಗಳನ್ನು ನೇಮಕ ಮಾಡಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.
 
ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದ ಎಸ್ ಕೆಎಂ, ಸರ್ಕಾರದಿಂದ ಕನಿಷ್ಟ ಬೆಂಬಲ ಬೆಲೆ ಸಮಿತಿಯ ರಚನೆಯನ್ನು ವಿರೋಧಿಸಿದ್ದು, ಅದರ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡದೇ ಇರಲು ನಿರ್ಧರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com