ಸಿಯಾಚಿನ್‌: 38 ವರ್ಷಗಳ ಬಳಿಕ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆ

38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬ ಶವ ಭಾನುವಾರ ಪತ್ತೆಯಾಗಿದ್ದು, ಅವರನ್ನು 19 ಕುಮಾವ್ ರೆಜಿಮೆಂಟ್‌ನ ಚಂದ್ರಶೇಖರ್ ಹರ್ಬೋಲಾ ಎಂದು ರಾಣಿಖೇತ್‌ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ ಗುರುತಿಸಿದೆ.
ಸಿಯಾಚಿನ್
ಸಿಯಾಚಿನ್
Updated on

ಸಿಯಾಚಿನ್‌: 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬ ಮೃತದೇಹ ಭಾನುವಾರ ಪತ್ತೆಯಾಗಿದ್ದು, ಅವರನ್ನು 19 ಕುಮಾವ್ ರೆಜಿಮೆಂಟ್‌ನ ಚಂದ್ರಶೇಖರ್ ಹರ್ಬೋಲಾ ಎಂದು ರಾಣಿಖೇತ್‌ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ ಗುರುತಿಸಿದೆ.

ಹರ್ಬೋಲಾ ಅವರು 1984 ರಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಲು 'ಆಪರೇಷನ್ ಮೇಘದೂತ್' ಗಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಕಳುಹಿಸಲ್ಪಟ್ಟ 20 ಸದಸ್ಯರ ಸೈನ್ಯದ ಭಾಗವಾಗಿದ್ದರು.

'ಆಪರೇಷನ್ ಮೇಘದೂತ್' ವೇಳೆ ನಾಪತ್ತೆಯಾದ 15 ಸೈನಿಕರ ಶವಗಳು ಪತ್ತೆಯಾಗಿದ್ದವು. ಆದರೆ ಇತರ ಐವರ ಶವಗಳು ಪತ್ತೆಯಾಗಿರಲಿಲ್ಲ. ಅವರಲ್ಲಿ ಹರ್ಬೋಲಾ ಅವರು ಒಬ್ಬರು.

ಅಲ್ಮೋರಾ ಮೂಲದ ಹರ್ಬೋಲಾ ಅವರ ಪತ್ನಿ ಶಾಂತಿ ದೇವಿ ಅವರು ಪ್ರಸ್ತುತ ಹಲ್ದ್ವಾನಿಯ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿಯ ಪಾರ್ಥಿವ ಶರೀರವನ್ನು ಸೋಮವಾರ ತಡರಾತ್ರಿ ಹಲ್ದ್ವಾನಿ ತಲುಪುವ ನಿರೀಕ್ಷೆಯಿದೆ.

ಹರ್ಬೋಲಾ ಅವರ ಮನೆಗೆ ಆಗಮಿಸಿದ ಹಲ್ದ್ವಾನಿ ಸಬ್ ಕಲೆಕ್ಟರ್ ಮನೀಶ್ ಕುಮಾರ್ ಮತ್ತು ತಹಸೀಲ್ದಾರ್ ಸಂಜಯ್ ಕುಮಾರ್ ಅವರ ಅಂತಿಮ ವಿಧಿವಿಧಾನಗಳನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ದುರಂತದ ಸಮಯದಲ್ಲಿ ಶಾಂತಿ ದೇವಿ ಅವರು ಮದುವೆಯಾಗಿ ಒಂಬತ್ತು ವರ್ಷಗಳಾಗಿತ್ತು. ಆಕೆಗೆ 28 ​​ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಅವರ ಹಿರಿಯ ಮಗಳಿಗೆ ನಾಲ್ಕು ವರ್ಷ ಮತ್ತು ಕಿರಿಯವ ಮಗಳಿಗೆ ಒಂದೂವರೆ ವರ್ಷವಾಗಿತ್ತು. ಹರ್ಬೋಲಾ ಅವರು ಜನವರಿ 1984 ರಲ್ಲಿ ಕೊನೆಯ ಬಾರಿಗೆ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಶೀಘ್ರದಲ್ಲೇ ಹಿಂತಿರುಗುವುದಾಗಿ ಭರವಸೆ ನೀಡಿದ್ದರು ಎಂದು ಶಾಂತಿ ದೇವಿ ನೆನಪಿಸಿಕೊಂಡರು. 

ಲಭ್ಯ ಮಾಹಿತಿ ಪ್ರಕಾರ ಅಲ್ಮೋರಾದ ದ್ವಾರಹತ್ ನಿವಾಸಿ ಹರ್ಬೋಲಾ 1975ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು.

ವರದಿಯ ಪ್ರಕಾರ, ಮತ್ತೊಬ್ಬ ಯೋಧನ ಶವವೂ ಪತ್ತೆಯಾಗಿದೆ ಆದರೆ ಆವರ ಗುರುತು ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com