ನವದೆಹಲಿ: ಇಂದು ಆಗಸ್ಟ್ 16 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ 4ನೇ ವರ್ಷದ ಪುಣ್ಯತಿಥಿ.
ಅದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಟಲ್ ಬಿಹಾರಿ ವಾಜಪೇಯಿಯವರ ಸಾಕುಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಸೇರಿದಂತೆ ಬಿಜೆಪಿ ನಾಯಕರು ದೆಹಲಿಯ ಸದೈವ ಅಟಲ್ ಸ್ಮಾರಕ ಕೇಂದ್ರಕ್ಕೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಹೊಸ ರೂಪ ಕೊಟ್ಟ ಅಟಲ್ ಬಿಹಾರಿ ವಾಜಪೇಯಿ ಅವರನ್ನು ರಾಜಕೀಯವಾಗಿ ವಿರೋಧ ಪಕ್ಷ ನಾಯಕರು ವಿರೋಧಿಸುತ್ತಿದ್ದರೇ ಹೊರತು ವೈಯಕ್ತಿಕವಾಗಿ ಅವರ ಬಗ್ಗೆ ಎಲ್ಲಾ ಪಕ್ಷಗಳ ನಾಯಕರು ಗೌರವಯುತವಾಗಿ ಇಂದಿಗೂ ಮಾತನಾಡುತ್ತಾರೆ. ಅಜಾತಶತ್ರು ಎಂದೇ ವಾಜಪೇಯಿ ಬದುಕಿದ್ದಾಗಲೂ ಕರೆಸಿಕೊಳ್ಳುತ್ತಿದ್ದರು.
Advertisement