ಸಾಂದರ್ಭಿಕ ಚಿತ್ರ
ದೇಶ
ಕೋವಿಡ್-19: ದೇಶದಲ್ಲಿಂದು 13,272 ಹೊಸ ಪ್ರಕರಣ ಪತ್ತೆ, 13,900 ಸೋಂಕಿತರು ಗುಣಮುಖ, 36 ಸಾವು
ದೇಶದಲ್ಲಿ ಕೋವಿಡ್-19 ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 13, 272 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4, 43,27,890ಕ್ಕೆ ಏರಿಕೆಯಾಗಿದೆ.
ನವದೆಹಲಿ: ದೇಶದಲ್ಲಿ ಕೋವಿಡ್-19 ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 13, 272 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4, 43,27,890ಕ್ಕೆ ಏರಿಕೆಯಾಗಿದೆ.
13,900 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,01,166ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮುಂಜಾನೆ 8 ಗಂಟೆಯವರೆಗೂ ದೊರೆತ ಮಾಹಿತಿ ಪ್ರಕಾರ, 36 ಸೋಂಕಿತರ ಸಾವಿನೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 5,27,289ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ. 4.21 ರಷ್ಟಿದ್ದು, ದೈನಂದಿನ ಚೇತರಿಕೆ ದರ ಶೇ. 98. 58 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳಲ್ಲಿ 664 ಪ್ರಕರಣಗಳು ಕಡಿಮೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.


