
ಮುಂಬೈ: ಆದಾಯ ತೆರಿಗೆ ಇಲಾಖೆ ರಿಲಾಯನ್ಸ್ ಸಮೂಹಗಳ ಅಧ್ಯಕ್ಷ ಅನಿಲ್ ಅಂಬಾನಿ ಅವರ ವಿರುದ್ಧ ಕಪ್ಪು ಹಣ ಕಾಯ್ದೆಯಡಿ ಮೊಕದ್ದಮೆ ಹೂಡಲು ನೊಟೀಸ್ ಜಾರಿ ಮಾಡಿದೆ.
420 ಕೋಟಿ ರೂಪಾಯಿ ತೆರಿಗೆ ವಂಚನೆ ಹಾಗೂ ಸ್ವಿಸ್ ಬ್ಯಾಂಕ್ ನಲ್ಲಿರುವ 814 ಕೋಟಿಗೂ ಹೆಚ್ಚಿನ ಬಹಿರಂಗಪಡಿಸದ ಹಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಉದ್ದೇಶಪೂರ್ವಕವಾಗಿ ಅಂಬಾನಿ ಅವರು ವಿದೇಶಿ ಬ್ಯಾಂಕ್ ನಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಲಿಲ್ಲ ಎಂದು ಐಟಿ ಇಲಾಖೆ ಆರೋಪಿಸಿದೆ. ಇದೇ ವಿಷಯವಾಗಿ ಆಗಸ್ಟ್ ಪ್ರಾರಂಭದಲ್ಲಿ ಅಂಬಾನಿಗೆ ಶೋಕಾಸ್ ನೊಟೀಸ್ ನ್ನೂ ಜಾರಿಗೊಳಿಸಿತ್ತು.
Advertisement