ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಉಚಿತ ಉಡುಗೊರೆ ಆಮಿಷ: ತ್ರಿಸದಸ್ಯ ಪೀಠಕ್ಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್

ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಉಡುಗೊರೆಗಳನ್ನು ನೀಡಿ ಆಮಿಷವೊಡ್ಡದಂತೆ ತಡೆಯಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತ್ರಿಸದಸ್ಯ ಪೀಠಕ್ಕೆ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಉಡುಗೊರೆಗಳನ್ನು ನೀಡಿ ಆಮಿಷವೊಡ್ಡದಂತೆ ತಡೆಯಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತ್ರಿಸದಸ್ಯ ಪೀಠಕ್ಕೆ ಉಲ್ಲೇಖಿಸಿದೆ.

ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಎನ್ ವಿ ರಮಣ, ನ್ಯಾಯಾಧೀಶರಾದ ಹಿಮಾ ಕೊಹ್ಲಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹಸ್ತಕ್ಷೇಪದ ವ್ಯಾಪ್ತಿ ಏನು, ತಜ್ಞರ ಆಯೋಗದ ನೇಮಕಾತಿಯು ಆದೇಶಗಳನ್ನು ರವಾನಿಸುವ ಮೊದಲು ವ್ಯಾಪಕ ವಿಚಾರಣೆಯ ಅಗತ್ಯವಿರುವ ಯಾವುದೇ ಉದ್ದೇಶವನ್ನು ಪೂರೈಸುತ್ತದೆಯೇ ಎಂಬ ಸಂಶಯಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ದೊಡ್ಡ ಮೊತ್ತವನ್ನು ವಿತರಿಸುವ ರಾಜ್ಯಗಳು ರಾಜ್ಯ ನೀತಿಯ ನಿರ್ದೇಶನ ತತ್ವಗಳ(DPSP) ಅಗತ್ಯಗಳ ಮರುಪರಿಶೀಲನೆಗೆ ನೇರವಾಗಿ ಸಂಬಂಧಿಸಿವೆಯೇ ಅಥವಾ ಇಲ್ಲವೇ ಎಂಬುದನ್ನು ಎತ್ತಿಹಿಡಿದ ಸುಬ್ರಮಣಿಯನ್ ಬಾಲಾಜಿ ಅವರ 2013 ರ ತೀರ್ಪು ಪರಿಗಣಿಸುವಂತೆ ತ್ರಿಸದಸ್ಯ ಪೀಠವನ್ನು ನ್ಯಾಯಪೀಠ ಇದೇ ಸಂದರ್ಭದಲ್ಲಿ ಸೂಚಿಸಿದೆ.

2013ರಲ್ಲಿ ಸುಬ್ರಮಣಿಯನ್ ಬಾಲಾಜಿ ಅವರ ತೀರ್ಪಿನಲ್ಲಿ, ಡಿಎಂಕೆಯಂತಹ ರಾಜಕೀಯ ಪಕ್ಷಗಳ ಉಚಿತ ಉಡುಗೊರೆಗಳ  ವಿಷಯವನ್ನು ವ್ಯವಹರಿಸುವಾಗ ಸುಪ್ರೀಂ ಕೋರ್ಟ್, ಪಕ್ಷಗಳು ಮತದಾರರಿಗೆ ಕಲರ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಮಿಕ್ಸರ್-ಗ್ರೈಂಡರ್‌ಗಳ ವಿತರಣೆಯ ರೂಪದಲ್ಲಿ ದೊಡ್ಡ ಮೊತ್ತವನ್ನು ವಿತರಿಸುತ್ತಿರುವುದನ್ನು ಗಮನಿಸಿತ್ತು. 

ಮೊನ್ನೆ ಬುಧವಾರ, ಪೀಠವು ರಾಜಕೀಯ ಪಕ್ಷಗಳು ಮತದಾರರಿಗೆ ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆ ನೀಡುವುದಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಚರ್ಚೆಯ ಅಗತ್ಯವನ್ನು ಪುನರುಚ್ಚರಿಸಿತ್ತು. ಅದರ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಗಳನ್ನು ಏಕೆ ಕರೆಯಬಾರದು ಎಂದು ಕೇಂದ್ರವನ್ನು ಕೇಳಿತ್ತು. ಅಲ್ಲದೆ ಅದಕ್ಕೆ ಹಿಂದಿನ ದಿನ ನ್ಯಾಯಾಲಯವು  ಭರವಸೆ ಕಲ್ಯಾಣ ಕ್ರಮವಾಗಿ ಅರ್ಹವಾಗಿದೆಯೇ ಅಥವಾ ಉಚಿತ ಉಡುಗೊರೆಯೇ ಎಂದು ನಿರ್ಧರಿಸುವ ಅಗತ್ಯವಿದೆ ಎಂದು ಹೇಳಿತ್ತು.

ಕ್ಷೌರಿಕನಿಗೆ ಶೇವಿಂಗ್ ಕಿಟ್, ವಿದ್ಯಾರ್ಥಿಗೆ ಸೈಕಲ್, ಕರಕುಶಲ ಕರ್ಮಿಗಳಿಗೆ ಅವರ ಕೆಲಸಕ್ಕೆ ಅನುಗುಣವಾಗಿ ಉಪಕರಣಗಳನ್ನು ನೀಡುವುದರಿಂದ ಅವರ ಜೀವನಶೈಲಿಯನ್ನು ಬದಲಾಯಿಸುವ ಅಥವಾ ಅವರನ್ನು ಮೇಲಕ್ಕೆತ್ತುವ ಉದಾಹರಣೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ನಗರವಾಸಿಗಳಿಗೆ ಉಚಿತ ಉಡುಗೊರೆಗಳು ಗ್ರಾಮೀಣ ಜನರ ಬದುಕನ್ನು ಬದಲಾಯಿಸಬಹುದು ಎಂದು ಉದಾಹರಣೆಯನ್ನು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com