ಸೋನಾಲಿ ಫೋಗಟ್ ಸಾವಿನ ಪ್ರಕರಣ: ಮತ್ತೊಬ್ಬ ಪೆಡ್ಲರ್ ಬಂಧನ, ಇದುವರೆಗೂ ಐವರು ಅರೆಸ್ಟ್

ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದು, ಇದುವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
ಸೋನಾಲಿ ಪೋಗಟ್
ಸೋನಾಲಿ ಪೋಗಟ್
Updated on

ಪಣಜಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದು, ಇದುವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ಈ ಹಿಂದೆ ಬಂಧಿತರಾಗಿದ್ದ ದತ್ತಪ್ರಸಾದ್ ಗಾಂವ್ಕರ್ ಅವರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ರಾಮ ಅಲಿಯಾಸ್ ರಾಮದಾಸ್ ಮಾಂಡ್ರೇಕರ್ ನನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಧೀರ್ ಸಗ್ವಾನ್, ಸುಖ್ವಿಂದರ್ ವಾಸಿ, ಎಡ್ವಿನ್ ನೂನ್ಸ್, ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಮಾಂಡ್ರೇಕರ್ ಎಂಬುವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.

ಹರಿಯಾಣದ ಹಿಸಾರ್ ಮೂಲದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಅವರನ್ನು ಆಗಸ್ಟ್ 23 ರಂದು ಅಂಜುನಾದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆರಂಭದಲ್ಲಿ ಸೋನಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿತ್ತಾದರೂ ನಂತರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಅನೇಕ  ಗಾಯಗಳು ಇದ್ದವು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com