ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಲಿರುವ ಆಮ್ ಆದ್ಮಿ ಪಕ್ಷದ ಶಾಸಕರು; ಆಪರೇಷನ್ ಲೋಟಸ್ ಬಗ್ಗೆ ತನಿಖೆಗೆ ಆಗ್ರಹ 

ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿಯಲ್ಲಿ ಸಿಬಿಐ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದು, ಆಪರೇಷನ್ ಲೋಟಸ್ ಬಗ್ಗೆ ತನಿಖೆಗೆ ಆಗ್ರಹಿಸಲಿದ್ದಾರೆ.
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿಯಲ್ಲಿ ಸಿಬಿಐ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದು, ಆಪರೇಷನ್ ಲೋಟಸ್ ಬಗ್ಗೆ ತನಿಖೆಗೆ ಆಗ್ರಹಿಸಲಿದ್ದಾರೆ.

ರಾಜ್ಯಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ ಸರ್ಕಾರಗಳನ್ನು ಉರುಳಿಸುವುದಕ್ಕೆ ಬಿಜೆಪಿ ಆಪರೇಷನ್ ಲೋಟಸ್ ಕಾರ್ಯಾಚರಣೆ ನಡೆಸುತ್ತಿದೆ ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸಲಿದ್ದೇವೆ ಎಂದು ಪಕ್ಷದ ನಾಯಕ ಅತಿಶಿ ಹೇಳಿದ್ದಾರೆ. 

ಆಮ್ ಆದ್ಮಿ ಪಕ್ಷದ 10 ಶಾಸಕರು ಮಧ್ಯಾಹ್ನ 3 ಗಂಟೆಗೆ ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಲಿದ್ದಾರೆ. ದೆಹಲಿಯಲ್ಲೂ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ, 40 ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದ್ದು, ಪ್ರತಿಯೊಬ್ಬರಿಗೂ 20 ಕೋಟಿ ರೂಪಾಯಿ, ಆಮಿಷವೊಡ್ಡಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 

ಬಿಜೆಪಿ ಯಾವುದೇ ವಿಧಾನಸಭೆಯಲ್ಲಿ ಸೋತರೆ, ಆಪರೇಷನ್ ಲೋಟಸ್ ನ್ನು ಪ್ರಾರಂಭಿಸುತ್ತದೆ. ವಿಪಕ್ಷಗಳ ಸರ್ಕಾರವನ್ನು ಉರುಳಿಸಲು ಸಿಬಿಐ ಹಾಗೂ ಇಡಿಯನ್ನು ಬಳಸಿಕೊಳ್ಳುತ್ತದೆ ಎಂದು ಅತಿಶಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com