
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆ.31 ರಂದು ವರ್ಚ್ಯುಯಲ್ ಶಾಲೆಯನ್ನು ಉದ್ಘಾಟಿಸಿದ್ದು, ದೇಶಾದ್ಯಂತ ಇರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಆ.31 ರಿಂದ ದೆಹಲಿ ಮಾಡಲ್ ವರ್ಚ್ಯುಯಲ್ ಶಾಲೆಗೆ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 9-12 ತರಗತಿಗಳಿಗಾಗಿ ಈ ಶಾಲೆಗಳು ಇರಲಿವೆ. ಈ ಶಾಲೆಗಳಲ್ಲಿ ಎನ್ಇಇಟಿ, ಸಿಯುಇಟಿ ಹಾಗೂ ಜೆಇಇ ಮುಂತಾದ ಪ್ರವೇಶ ಪರೀಕ್ಷೆಗಳು ಹಾಗೂ ತಜ್ಞರಿಂದ ತರಬೇತಿಯನ್ನೂ ಕೊಡಿಸಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವರ್ಚ್ಯುಯಲ್ ಶಾಲೆಗಳು ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಹಲವಾರು ಕಾರಣಗಳಿಂದಾಗಿ ಹಲವು ಮಕ್ಕಳಿಗೆ ಶಾಲೆಗಳಿಗೆ ತೆರಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳು ವಿದ್ಯಾವಂತರಾಗುವುದನ್ನು ನಾವು ವರ್ಚ್ಯುಯಲ್ ಶಾಲೆಗಳ ಮೂಲಕ ಖಾತ್ರಿಪಡಿಸಿಕೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
"ಆನ್ ಲೈನ್ ಮೂಲಕ ತರಗತಿಗಳು ನಡೆಯಲಿದ್ದು, ಉಪನ್ಯಾಸಗಳನ್ನು ಅಪ್ ಲೋಡ್ ಮಾಡಲಾಗುತ್ತದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
Advertisement