ಹಿರಿಯ ನಟಿ ಜರಾನಾ ದಾಸ್
ಹಿರಿಯ ನಟಿ ಜರಾನಾ ದಾಸ್

ಒಡಿಯಾ ಚಿತ್ರರಂಗದ ಹಿರಿಯ ನಟಿ ಜರಾನಾ ದಾಸ್ ನಿಧನ

ಒಡಿಯಾ ಚಿತ್ರರಂಗದ ಹಿರಿಯ ನಟಿ ಜರಾನಾ ದಾಸ್ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಶುಕ್ರವಾರ ತಿಳಿಸಿವೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
Published on

ಭುವನೇಶ್ವರ: ಒಡಿಯಾ ಚಿತ್ರರಂಗದ ಹಿರಿಯ ನಟಿ ಜರಾನಾ ದಾಸ್ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಶುಕ್ರವಾರ ತಿಳಿಸಿವೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಟ ನಟಿ ಜರಾನಾ ದಾಸ್ ಅವರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಒಡಿಯಾ ಚಿತ್ರರಂಗದಲ್ಲಿ ಜೀವನ ಶ್ರೇಷ್ಠ ಸಾಧನೆಗಾಗಿ ಜರಾನಾ ದಾಸ್ ಅವರಿಗೆ ಒಡಿಶಾ ಸರ್ಕಾರ ಪ್ರತಿಷ್ಠಿತ 'ಜಯದೇವ್ ಪುರಸ್ಕಾರ' ನೀಡಿ ಗೌರವಿಸಿತ್ತು.

1945 ರಲ್ಲಿ ಜನಿಸಿದ ಬಹುಮುಖ ನಟಿ ಜರಾನಾ ದಾಸ್ ಅವರು 'ಮಲಜಾಹ್ನ', 'ಅಮದಬಟಾ', 'ಆದಿನ ಮೇಘ', 'ಅಭಿನೇತ್ರಿ', 'ಶ್ರೀ ಜಗನ್ನಾಥ್', 'ನಾರಿ', 'ಹಿರಾ ನಿಲ್ಲ' ಸೇರಿದಂತೆ ಹಲವು ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದರು.

ಚಲನಚಿತ್ರಗಳ ಹೊರತಾಗಿ, ಅವರು ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ ಮತ್ತು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ದಾಸ್ ಅವರು ಹೆಸರಾಂತ ಒಡಿಯಾ ರಾಜಕಾರಣಿ ಹರೇಕೃಷ್ಣ ಮಹತಾಬ್ ಅವರ ಜೀವನ ಆಧಾರಿತ ಸಾಕ್ಷ್ಯಚಿತ್ರವನ್ನು ಸಹ ನಿರ್ದೇಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com